Dream, Dream, Dream. Dreams transform into thoughts and thoughts result in ACTION.
-APJ Abdul Kalam
11th President of India
ಸ್ಪರ್ಧಾರ್ಥಿಗಳ ಭವಿಷ್ಯದ ಪರೀಕ್ಷೆಗೆ ಉಪಯುಕ್ತವಾಗುವ ಮಾಹಿತಿ ಮತ್ತು ಪ್ರಶ್ನೋತ್ತರ ಮಾಲಿಕೆಗಳು
ಮುನ್ನುಡಿ
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸ್ಪರ್ಧಾರ್ಥಿಗಳು ಯಶಸ್ಸನ್ನು ಸಾಧಿಸಬೇಕಾದರೆ, ಮೊದಲು ಆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವ ರೀತಿಯ ಪ್ರಶ್ನೆಗಳು ಬರುತ್ತವೆ ಎಂಬುದನ್ನು ಮೊದಲು ಅರಿಯಬೇಕು. ಇದೇ ರೀತಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗಾಗಿ ಪೊಲೀಸ್ ಇಲಾಖೆಯು ನಡೆಸಿದ ಈ ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಅಧ್ಯಯನ ಮಾಡುವುದು ಅನಿವಾರ್ಯವಾಗುತ್ತದೆ ಈ ಹಿನ್ನೆಲೆಯಲ್ಲಿ ಸ್ಪರ್ಧಾರ್ಥಿಗಳಿಗೆ ಹಿಂದಿನ ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆಗಳನ್ನು ಹೇಗೆ ಕೇಳಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಲು ಮತ್ತು ಸಮರ್ಥವಾಗಿ ಪ್ರಶ್ನೆ ಪತ್ರಿಕೆಯನ್ನು ಬಿಡಿಸುವ ಕ್ರಮವನ್ನು ತಿಳಿಸಲು ನಿಮ್ಮ ಸ್ಪರ್ಧಾ ವಿಶೇಶ ಪಬ್ಲಿಕೇಷನ್ ವತಿಯಿಂದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗಾಗಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಇದುವರೆಗೂ ನಡೆಸಿರುವ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ವಿವರಣೆ ಸಹಿತ ಬಿಡಿಸಲಾಗಿದೆ. ಈ ಪುಟವು ಪೊಲೀಸ್ ನೇಮಕಾತಿ ಪರೀಕ್ಷೆಗಳಿಗೆ ಮಾದರಿಯಾಗಲಿದೆ. ಈ ಪುಟವನ್ನು ಸಮಗ್ರವಾಗಿ ಅಧ್ಯಯನ ಮಾಡಿದರೆ, ಪರೀಕ್ಷೆಯ ಸಂಪೂರ್ಣ ಚಿತ್ರಣ ದೊರೆಯಲಿದೆ. ಪರೀಕ್ಷೆಯಲ್ಲಿ ಯಾವ ವಿಷಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಪ್ರಶ್ನೆಗಳನ್ನು ಹೇಗೆ ಕೇಳಲಾಗುತ್ತಿದೆ ಹಾಗೂ ಸ್ಪರ್ಧಾರ್ಥಿಗಳು ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕೆಂಬ ಜ್ಞಾನ ಮೂಡುತ್ತದೆ.
ಈ ಪ್ರಶೋತ್ತರ ಮಾಲಿಕೆಯು ಪ್ರಶ್ನೆಪತ್ರಿಕೆಗಳಿಗೆ ಇಲಾಖೆಯ ಅಧಿಕೃತ ಉತ್ತರಗಳೊಂದಿಗೆ ವಿಶ್ಲೇಷಣಾತ್ಮಕವಾಗಿ ಪ್ರಸ್ತುತ ವಿದ್ಯಮಾನಗಳನ್ನು ಗಮನದಲ್ಲಿರಿಸಿಕೊಂಡು ಭವಿಷ್ಯದ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ಬಿಡಿಸಲಾಗಿದೆ. ಈ ಪುಟದಲ್ಲಿ ನಾವು ವಿವರಿಸುತ್ತಿರುವ ವಿಷಯವನ್ನು ಹಲವಾರು ಪುಸ್ತಕಗಳಲ್ಲಿ ಮುದ್ರಿಣಗೊಂಡಿದ್ದು ಅತಿ ಹೆಚ್ಚು ಸಂಖ್ಯೆಯಲ್ಲಿ ಸ್ಪರ್ಧಾರ್ಥಿಗಳು ಅಧ್ಯಯನ ಮಾಡಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಪರ್ಧಾತ್ಮಕ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ವಿವರಣೆಯ ಸಂದರ್ಭದಲ್ಲೇ ಅವುಗಳನ್ನು ನೀಡುತ್ತಾ, ಪರಿಪೂರ್ಣವಾದಂತಹ ಮಾಹಿತಿಯನ್ನು ನೀಡಲು ಪ್ರಯತ್ನಿಸುತ್ತೇನೆ. ಈ ಪ್ರಶೋತ್ತರ ಮಾಲಿಕೆಗಳು ನಿಮ್ಮ ನೇಮಕಾತಿಗೆ ಉಪಯುಕ್ತವಾಗಲಿದ್ದು, ಈ ಮೂಲಕ ತಾವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಲೆಂದು ಆಶಿಸುತ್ತೇನೆ.
ಮೂರನೇ ಪಾಣಿಪತ್ ಕದನ: ಭಾರತೀಯ ಇತಿಹಾಸದಲ್ಲಿ ಒಂದು ತಿರುವು
ಮೂರನೇ ಪಾಣಿಪತ್ ಕದನದ ಕಾರಣಗಳು ಮತ್ತು ಪರಿಣಾಮಗಳು ಜನವರಿ 14, 1761 ರಂದು ನಡೆದ ಮೂರನೇ ಪಾಣಿಪತ್ ಕದನವು ಭಾರತೀಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ಮತ್ತು ಭೀಕರ
ಆಧುನಿಕ ಭಾರತೀಯ ಇತಿಹಾಸ : ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯದವರೆಗೆ
ಆಧುನಿಕ ಭಾರತೀಯ ಇತಿಹಾಸವು 18 ನೇ ಶತಮಾನದ ಮಧ್ಯಭಾಗದಿಂದ 1947 ರಲ್ಲಿ ಭಾರತದ ಸ್ವಾತಂತ್ರ್ಯದವರೆಗೆ ವ್ಯಾಪಿಸಿದೆ. ಈ ಅವಧಿಯಲ್ಲಿ ಭಾರತವು ಮೊಘಲ್ ಪ್ರಭಾವದ ಅಡಿಯಲ್ಲಿ ರಾಜಪ್ರಭುತ್ವದ ರಾಜ್ಯಗಳ
ಮೌರ್ಯ ಸಾಮ್ರಾಜ್ಯದ ಉದಯ ಮತ್ತು ಪರಂಪರೆ: ಭಾರತದ ಮೊದಲ ಮಹಾ ರಾಜವಂಶ
ಮೌರ್ಯ ಸಾಮ್ರಾಜ್ಯದ ಅನ್ವೇಷಣೆ: ಚಂದ್ರಗುಪ್ತನಿಂದ ಅಶೋಕನವರೆಗೆ 322 BCE ನಲ್ಲಿ ಚಂದ್ರಗುಪ್ತ ಮೌರ್ಯ ಅವರು ನಂದ ರಾಜವಂಶವನ್ನು ಉರುಳಿಸಿದ ನಂತರ ಮೌರ್ಯ ಸಾಮ್ರಾಜ್ಯವನ್ನು(mauryan empire) ಸ್ಥಾಪಿಸಿದರು. ಅವರು
“ಕೇಶವಾನಂದ ಭಾರತಿ(kesavananda bharati case) v ಕೇರಳ: 1973ರ ತೀರ್ಪಿನ ಸಂವಿಧಾನಾತ್ಮಕ ಪರಿಣಾಮಗಳು”
“ಕೇಶವಾನಂದ ಭಾರತಿ ಪ್ರಕರಣ(kesavananda bharati case): ಸಂಸತ್ತಿನ ತಿದ್ದುಪಡಿ ಅಧಿಕಾರ ಮತ್ತು ಸಂವಿಧಾನದ ಮೂಲಭೂತ ತತ್ವಗಳ ಹೋರಾಟ” (kesavananda bharati case)ಕೇಶವಾನಂದ ಭಾರತಿ ವರ್ಸಸ್ ಸ್ಟೇಟ್ ಆಫ್
(SSC GD) ಎಸ್‌ಎಸ್‌ಸಿ ಕಾನ್ಸ್‌ಟೇಬಲ್ ಜಿಡಿ ನೇಮಕಾತಿ 2025 – 39481 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.
01. ಎಸ್‌ಎಸ್‌ಸಿ ಕಾನ್ಸ್‌ಟೇಬಲ್ ಜಿಡಿ(SSC GD) ನೇಮಕಾತಿ 2025 – 39481 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಹುದ್ದೆಯ ಹೆಸರು: SSC ಕಾನ್‌ಸ್ಟೆಬಲ್ GD 2025 ಆನ್‌ಲೈನ್
ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳುವುದು?(police constable syllabus)
ಇದೊಂದು ಪ್ರಮುಖ ಪೋಸ್ಟ್ ಆಗಿದ್ದು, ನಮ್ಮ “website” ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಬಯಸುವವರಿಗೆ ಮಾರ್ಗದರ್ಶಿಯಾಗುತ್ತದೆ. ಇಲ್ಲಿ ನೀವು ಪರೀಕ್ಷೆಯ ಪಠ್ಯಕ್ರಮ, ಅಂಕಗಳ ಹಂಚಿಕೆ, ಮತ್ತು
ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯ ಪಠ್ಯಕ್ರಮ: ಸಾಮಾನ್ಯ ಅಧ್ಯಯನ ಪತ್ರಿಕೆ
- ಸಾಮಾನ್ಯ ಜ್ಞಾನ (General Knowledge): ಸಾಮಾನ್ಯ ಜ್ಞಾನದಲ್ಲಿ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ಆರ್ಥಿಕ, ಕ್ರೀಡಾ ಕ್ಷೇತ್ರ ಬೆಳವಣಿಗೆಗಳು, ರಾಜ್ಯ, ರಾಷ್ಟ್ರೀಯ & ಅಂತರಾಷ್ಟ್ರೀಯ ವಿದ್ಯಮಾನಗಳನ್ನು ಒಳಗೊಂಡಿದೆ.
- ಸಾಮಾನ್ಯ ವಿಜ್ಞಾನ (General Science): ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಇಸ್ರೋ, ಡಿಆರ್‌ಡಿಒ, ತಂತ್ರಜ್ಞಾನ ಹಾಗೂ ನಿತ್ಯಜೀವನ & ಅನ್ವಯಿಕ ವಿಜ್ಞಾನವನ್ನು ಒಳಗೊಂಡಿರುತ್ತದೆ.
- ಭೂಗೋಳಶಾಸ್ತ್ರ (Geography): ಭಾರತದ ಭೂಗೋಳಶಾಸ್ತ್ರ, ಕರ್ನಾಟಕ ಭೂಗೋಳಶಾಸ್ತ್ರ ಹಾಗೂ ಪ್ರಾಕೃತಿಕ ಭೂಗೋಳಶಾಸ್ತ್ರವನ್ನು ಒಳಗೊಂಡಿದೆ.
- ಇತಿಹಾಸ: ಪ್ರಾಚೀನ, ಮಧ್ಯಕಾಲೀನ, ಆಧುನಿಕ ಭಾರತದ ಇತಿಹಾಸ, ಜಾಗತಿಕ ಹಾಗೂ ಕರ್ನಾಟಕದ ಇತಿಹಾಸ,
- ಭಾರತದ ಸಂವಿಧಾನ (Constitution of India): ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಮೂಲಭೂತ ಹಕ್ಕುಗಳು.
- ರಾಜ್ಯ ನಿರ್ದೇಶಕ ತತ್ವಗಳು, ಮೂಲಭೂತ ಕರ್ತವ್ಯಗಳು, ಸಾಂವಿಧಾನಿಕ ಸಂಸ್ಥೆಗಳು, ಶಾಸನಬದ್ಧ ಸಂಸ್ಥೆಗಳು ಹಾಗೂ ಇತರೆ ಸಂಬಂಧಿತ ಮಾಹಿತಿಗಳನ್ನು ಒಳಗೊಂಡಿದೆ.
- ಭಾರತದ ಸ್ವಾತಂತ್ರ್ಯ ಸಂಗ್ರಾಮ ಭಾರತದ ರಾಷ್ಟ್ರೀಯ ಚಳುವಳಿಯ ಹೋರಾಟದ ಹಂತಗಳು, 1857ರ ಸಿಪಾಯಿ ದಂಗೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಮಂದಗಾಮಿಗಳು, ತೀವ್ರಗಾಮಿ ನಾಯಕರು, ಗಾಂಧಿಯುಗ ಹಾಗೂ ಸ್ವಾತಂತ್ರ್ಯ ನಂತರದ ರಾಜಕೀಯ ಬೆಳವಣಿಗೆ.