1. 2019ರಲ್ಲಿ ಯಾವ ಪ್ರಸಿದ್ಧ ವ್ಯಕ್ತಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು ?
- ರಾಜ್ ಕಪೂರ್
- ಲತಾ ಮಂಗೇಶ್ವರ್ ಸಿ
- ಅಮಿತಾಬ್ ಬಚ್ಚನ್
- ವಿನೋದ್ ಖನ್ನಾ
- 2019ರಲ್ಲಿ 2018ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಅಮಿತಾಬ್ ಬಚ್ಚನ್ ಅವರಿಗೆ ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಯನ್ನು ಭಾರತೀಯ ಸಿನಿಮಾ ರಂಗದಲ್ಲಿನ ಜೀವಮಾನ ಸಾಧನೆಗಾಗಿ ಭಾರತ ಸರ್ಕಾರವು 1969ರಿಂದ ನೀಡುತ್ತಿದೆ. 1969ರಲ್ಲಿ ಮೊದಲ ಈ ಪ್ರಶಸ್ತಿಯನ್ನು ದೇವಿಕಾ ರಾಣಿ (ಹಿಂದಿ) ಅವರಿಗೆ ನೀಡಲಾಗಿತ್ತು. ಈ ಪ್ರಶಸ್ತಿ ಪಡೆದ ಏಕೈಕ ಕನ್ನಡಿಗ ನಟ ಡಾ. ರಾಜ್ ಕುಮಾರ್ (1995), ರಜಿನಿಕಾಂತ್ (2019ನೇ ಸಾಲಿನ 67ನೇ ಪ್ರಶಸ್ತಿಯನ್ನು 2021 ರಲ್ಲಿ ಘೋಷಿಸಲಾಗಿದೆ)
2. "Sudden death" ಸಂಬಂಧಿಸಿರುವುದು?
- ಫುಟ್‌ಬಾಲ್
- ಬ್ಯಾಸ್ಕೆಟ್ ಬಾಲ್
- ಹಾಕಿ
- ಹಾರ್ಸ್ ರೇಸಿಂಗ್
- “sudden death” ಎಂಬ ಪದವು ಒಂದು ಸ್ಪರ್ಧೆಯ ಸ್ವರೂಪವಾಗಿದ್ದು, ಅಲ್ಲಿ ಒಬ್ಬ ಸ್ಪರ್ಧಿ ಇತರರಿಗಿಂತ ಮುಂದಾದ ತಕ್ಷಣ ಆಟವು ಕೊನೆಗೊಳ್ಳುತ್ತದೆ. ಆ ಪ್ರತಿ ಸ್ಪರ್ಧಿ ವಿಜೇತನಾಗುತ್ತಾನೆ. ನಿಯಂತ್ರಣ ಆಟದ ಸಮಯದ ಕೊನೆಯಲ್ಲಿ ಅಥವಾ ಸಾಮಾನ್ಯ ಆಟದ ಕಾರ್ಯವನ್ನ ಪೂರ್ಣಗೊಳಿಸಿದಾಗ ಹಠಾತ್ ಸಾವು ಅಥವಾ ಮರಣವನ್ನು ಟೈ ಬ್ರೇಕರ್ ಆಗಿ ಬಳಸಲಾಗುತ್ತದೆ. ಗಾಲ್ಫ್, ಫೆನ್ಸಿಂಗ್, ಫುಟ್ಬಾಲ್, ಹಾಕಿ ಕ್ರೀಡೆಗಳಲ್ಲಿ ಬಳಸುವ ಸಂಪ್ರದಾಯವಿದೆ.
3. ಅರೆ ಕಾನಟ್ ವಲಯ (areca-nut))ದಲ್ಲಿ ಮೊದಲ ಬಾರಿಗೆ ಭೌಗೋಳಿಕ ಸೂಚನಾ ಟ್ಯಾಗ್ (Geographic Indication Tag) ಪಡೆದ ಸ್ಥಳ ಯಾವುದು?
- ಮೈಸೂರು
- ಶಿರಸಿ
- ಉಡುಪಿ
- ಕಾಸರಗೋಡು
- ಅರಕಾನಟ್ ಎಂದರೆ ಅಡಿಕೆ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯು ಅಡಿಕೆಯ ಭೌಗೋಳಿಕ ಸೂಚನಾ ಟ್ಯಾಗ್ ಅನ್ನು 2019 ಮಾರ್ಚ್‌ನಲ್ಲಿ ಪಡೆದಿದೆ. ಶಿರಸಿ ಸುಫಾರಿ ಎಂದೇ ಶಿರಸಿ ಅಡಿಕೆಯು ಖ್ಯಾತಿಯಾಗಿದೆ. ಶಿರಸಿಯನ್ನು ಕಲ್ಯಾಣ ಪಟ್ಟಣ ಎಂದೂ ಕೂಡ ಕರೆಯಲಾಗುತ್ತಿತ್ತು. ಈ ಸ್ಥಳವು ಅಡಿಕೆ, ಏಲಕ್ಕಿ, ಮೆಣಸು, ವೆನಿಲ್ಲಾ, ವೀಳ್ಯದೆಲೆಗೂ ಪ್ರಸಿದ್ದಿಯಾಗಿದೆ. ಅಡಿಕೆಯ ನಾಡು ಎಂದು ಚನ್ನಗಿರಿ ಸ್ಥಳವನ್ನು ಕರೆಯುತ್ತಾರೆ.
4. ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಪ್ರಜೆಯಾಗಲು ಷರತ್ತು (condition) ಅಲ್ಲ ?
- ಜನ್ಮ
- ಆಸ್ತಿ ಸಂಪಾದಿಸುವುದು
- ನೈಸರ್ಗಿಕರಣ
- ಮೂಲ
- ಕೊಟ್ಟಿರುವ ಆಯ್ಕೆಗಳ ಪ್ರಕಾರ ಭಾರತದ ಪ್ರಜೆಯಾಗಲು ಆಸ್ತಿ ಸಂಪಾದಿಸುವುದು ಕಾಯ್ದೆಯ ಪ್ರಕಾರ ಷರತ್ತು ಆಗಿಲ್ಲ. ಭಾರತದಲ್ಲಿ 1955ರ ಪೌರತ್ವ ಕಾಯ್ದೆ ಪ್ರಕಾರ ಒಬ್ಬ ವ್ಯಕ್ತಿಯು 5 ಮಾರ್ಗಗಳಿಂದ ಪೌರತ್ವ ಪಡೆಯಬಹು ಜನನ, ನೈಸರ್ಗಿಕ(ಸಹಜಕೃತ) ಕಾರಣ. ಮೂಲಸ್ಥಾನ, ಸಂಸ್ಕೃತಿ ಮತ್ತು ಭೂಪ್ರದೇಶಗಳನ್ನು ವಿಲೀನಗೊಳಿಸುವ ಮೂಲಕ ಪಡೆಯಬಹುದು. 2019ರ ಡಿಸೆಂಬರ್ 11ರಂದು ಸಂಸತ್ತಿನಲ್ಲಿ 1955ರ ಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಿದ ಮಸೂದೆಗೆ ಅನುಮೋದನೆ ದೊರಕಿದೆ. ಪಾಕಿಸ್ಥಾನ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ದೇಶಗಳಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರಾದ ಹಿಂದೂ, ಸಿಖ್, ಬೌದ್ಧರು, ಜೈನ, ಪಾರ್ಸಿ ಮತ್ತು ಕ್ರೈಸ್ತ ಧರ್ಮಕ್ಕೆ ಸೇರಿದ ಎಲ್ಲಾ ವಲಸಿಗರಿಗೂ ಭಾರತ
5. ಕಂಪ್ಯೂಟರ್‌ನಿಂದ ಮಾಹಿತಿಯನ್ನು ಕಾಗದದ ಮೇಲೆ ಚಿತ್ರಾತ್ಮಕ ರೂಪಕ್ಕೆ ಭಾಷಾಂತರಿಸಲು ಯಾವ ಔಟ್ ಪುಟ್ ಸಾಧನವನ್ನು ಬಳಸಲಾಗುತ್ತದೆ ?
- ಟಚ್ ಪ್ಯಾನೆಲ್
- ಮೌಸ್
- ಪ್ಲಾಟರ್
- ಕಾರ್ಡ್ ರೀಡರ್
- ಕಂಪ್ಯೂಟರ್‌ನಿಂದ ಮಾಹಿತಿಯನ್ನು ಕಾಗದದ ಮೇಲೆ ಚಿತ್ರಾತ್ಮಕ ರೂಪಕ್ಕೆ ಭಾಷಾಂತರಿಸಲು ಪ್ಲಾಟರ್ ಎಂಬ ಔಟ್‌ಪುಟ್ ಸಾಧನವನ್ನು ಬಳಸಲಾಗುತ್ತದೆ. ಫ್ಲಾಟರ್ ಎಂಬುದು ವೆಕ್ಟರ್ ಗ್ರಾಫಿಕ್ಸ್ ರೇಖಾ ಚಿತ್ರಗಳನ್ನು ಉತ್ಪಾದಿಸುವುದು. ಇದು ರೇಖಾ ಚಿತ್ರಗಳನ್ನು ಹೆಚ್ಚು ವೇಗವಾಗಿ ಹಾಗೂ ಗುಣಮಟ್ಟವಾಗಿ ಉತ್ಪಾದಿಸುತ್ತದೆ. ಇನ್‌ಪುಟ್ ಸಾಧನಗಳು: ಟಚ್ ಪ್ಯಾನಲ್, ಮೌಸ್, ಕೀಬೋರ್ಡ್, ಟ್ರ್ಯಾಕ್ ಬಾಲ್. ಔಟ್‌ಪುಟ್ ಸಾಧನಗಳು: ಪ್ರಿಂಟರ್, ಮಾನಿಟರ್, ಸ್ಪೀಕರ್ ಫ್ಲಾಟರ್.
6. ಬಿಟ್ಟು ಹೋದ ಸಂಖ್ಯೆಯನ್ನು ಹುಡುಕಿ?
12 : 30 : 14 : _____
- 36
- 28
- 35
- 42
7. ಆಗ್ನೆಯ ಉತ್ತರವಾಗಿದ್ದರೆ, ಈಶಾನ್ಯ ಪಶ್ಚಿಮವಾಗುತ್ತದೆ. ಪಶ್ಚಿಮ ಏನಾಗುತ್ತದೆ?
- ಈಶಾನ್ಯ
- ವಾಯುವ್ಯ
- ಆಗ್ನೆಯ
- ನೈರುತ್ಯ
8. ಬದರಿನಾಥ ಯಾವ ನದಿಯ ದಡದಲ್ಲಿದೆ ?
- ಮಂದಾಕಿನಿ
- ಸಟೀಜ್
- ಅಲಕಾನಂದ
- ಬ್ರಹ್ಮಪುತ್ರ
- ಅಲಕಾನಂದ ನದಿಯು ಗಂಗಾ ನದಿಯ ಮೂಲ ನದಿಯಾಗಿದೆ. ಈ ನದಿಯು ಉತ್ತರಾಖಂಡ ರಾಜ್ಯದಲ್ಲಿ ಹರಿಯುತ್ತಿದ್ದು, ಈ ನದಿಗೆ ಕೇದಾರ್ ನಾಥ ಎಂಬಲ್ಲಿ ಮಂದಾಕಿನಿ ನದಿಯು ಸೇರುತ್ತದೆ. ನಂತರ ದೇವಪ್ರಯಾಗದಲ್ಲಿ ಭಗೀರಥಿಯೊಂದಿಗೆ ಸೇರಿ ಗಂಗಾ ನದಿಯಾಗಿ ಹರಿಯುತ್ತದೆ. ಮಂದಾಕಿನಿ ನದಿಯು ಅಲಕಾನಂದ ನದಿಯ ಉಪ ನದಿಯಾಗಿದ್ದು, ಉತ್ತರಾಖಂಡ ರಾಜ್ಯದ ಕೇದಾರನಾಥ ಸಮೀಪ ಉಗಮಿಸುತ್ತದೆ ಮತ್ತು ರುದ್ರಪ್ರಯಾಗ್‌ನಲ್ಲಿ ಅಲಕಾನಂದ ನದಿಗೆ ಸೇರುತ್ತದೆ.
9. ಬಿರ್ಜು ಮಹಾರಾಜರ ಬಗ್ಗೆ ಈ ಕೆಳಗಿನ ಯಾವ ಹೇಳಿಕೆ ನಿಜವಾಗಿದೆ ?
- ಸಂತೂರ್‌ನ ನಿಷ್ಣಾತ
- ಮಿದ್ರಂಗಂ ಮೈಸೋ
- ಕಥಕ್ ನರ್ತಕ
- ಯಾವುದೂ ಅಲ್ಲ
- ಪಂಡಿತ್ ಬಿರ್ಜು ಮಹಾರಾಜ ಅವರು ಉತ್ತರಪ್ರದೇಶದ ಲಕ್ಕೋ ಮೂಲದವರಾಗಿದ್ದಾರೆ. ಉತ್ತರ ಪ್ರದೇಶ ರಾಜ್ಯದ ಶಾಸ್ತ್ರೀಯ ನೃತ್ಯವಾದ ಕಥಕ್ ನೃತ್ಯದ ಪ್ರಸಿದ್ಧ ನರ್ತಕರಾಗಿದ್ದು, ಭಾರತದ ಕಲಾ ಮತ್ತು ನಾಟ್ಯಗಳ ಪಿತಾಮಹ ಎನಿಸಿಕೊಂಡಿದ್ದಾರೆ. ಕಥಕ್ ಎಂಬುದು ಭಾರತದ 8 ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ಒಂದಾಗಿದೆ. ಆದರೆ ಕಥಕ್ಕಳ ಎಂಬುದು ಕೇರಳ ರಾಜ್ಯದ ಶಾಸ್ತ್ರೀಯ ನೃತ್ಯವಾಗಿದೆ.
10. ಭಾರತೀಯ ಸಂವಿಧಾನದಲ್ಲಿ ನಮೂದಿಸಲಾಗಿರುವ ಮೂಲಭೂತ ಹಕ್ಕುಗಳ ರಕ್ಷಕರು ಯಾರು ?
- ಸರ್ವೋಚ್ಚ ನ್ಯಾಯಾಲಯ
- ಸಂಸತ್ತು
- ರಾಷ್ಟ್ರಪತಿ
- ಸಂವಿಧಾನ
- ಸರ್ವೋಚ್ಛ ನ್ಯಾಯಾಲಯವು ಭಾರತದ ಅತ್ಯುನ್ನತ ನ್ಯಾಯಾಲಯವಾಗಿದ್ದು, ಸಂವಿಧಾನದ ರಕ್ಷಣೆ. ಮೂಲಭೂತ ಹಕ್ಕುಗಳ ರಕ್ಷಣೆ ಮತ್ತು ಯಾವುದೇ ಮೊಕದ್ದಮೆಯ ಕೊನೆಯ ಹಂತವಾಗಿದೆ. ಸಂವಿಧಾನದ 143ನೇ ವಿಧಿಯ ಅನ್ವಯ ಆಡಳಿತದಲ್ಲಿ ಗೊಂದಲವುಂಟಾದಾಗ ರಾಷ್ಟ್ರಪತಿಗಳು ಅಟಾರ್ನಿ ಜನರಲ್ ಅವರ ಮೂಲಕ ಸುಪ್ರೀಂಕೋರ್ಟ್ನ ಸಲಹೆ ಕೇಳಬಹುದು. ಸಂವಿಧಾನದ 76ನೇ ವಿಧಿಯನ್ವಯ ಭಾರತದಲ್ಲಿ ಅಟಾರ್ನಿ ಜನರಲ್ ಹುದ್ದೆಗೆ ಅವಕಾಶ ಕಲ್ಪಿಸಲಾಗಿದೆ. ಭಾರತದ ಅತ್ಯುನ್ನತ ಕಾನೂನು ಅಧಿಕಾರಿ ಅಟಾರ್ನಿ ಜನರಲ್ ಆಗಿದ್ದು, ರಾಷ್ಟ್ರಪತಿಗಳು ಇವರನ್ನು ನೇಮಕ ಮಾಡುತ್ತಾರೆ. ಸಂಸತ್ತಿನ ಸದಸ್ಯರಲ್ಲದಿದ್ದರೂ ಕೂಡ ಸಂಸತ್ತಿನ ಎರಡೂ ಸದನಗಳ ಕಲಾಪಗಳಲ್ಲಿ ಭಾಗವಹಿಸಬಹುದು ಮತ್ತು ಸಂಸತ್ತಿನ ಯಾವುದೇ ಸಮಿತಿಯ ಸದಸ್ಯರಾಗಿ ಭಾಗವಹಿಸಬಹುದು. ಆದರೆ ಮತದಾನ ಮಾಡುವಂತಿಲ್ಲ.
ನೆನಪಿರಲಿ: ಇಂಧನ ಸಂಶೋಧನೆಯ ನೊಬೆಲ್ ಪ್ರಶಸ್ತಿ : ಇನಿ ಪ್ರಶಸ್ತಿ (ENI AWARD) - ಇಂಧನ ಕೇಂದ್ರದ ಮುಂಚೂಣಿ ಮತ್ತು ಅತ್ಯುನ್ನತ ಪ್ರಶಸ್ತಿಯಾಗಿದ್ದು, ಇಂಧನ ಸಂಶೋಧನಾ ವಲಯದ ನೊಬೆಲ್ ಪ್ರಶಸ್ತಿ ಎಂದೇ ಪರಿಗಣಿತವಾಗಿರುವ ಅಂತಾರಾಷ್ಟ್ರೀಯ ಇನಿ ಪ್ರಶಸ್ತಿಗೆ ಭಾರತದ ಖ್ಯಾತ ವಿಜ್ಞಾನಿ ಸಿ.ಎನ್.ಆರ್. ರಾವ್ ಅವರು ಭಾಜನರಾಗಿದ್ದಾರೆ. ಇವರು ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ಇಂಧನ ಶೇಖರಣೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆ ನಡೆಸಿದ್ದು, ಜಲಜನಕ ಆಧಾರಿತ ಇಂಧನದ ಮೇಲೆ ಅಧ್ಯಯನ ನಡೆಸಿದ್ದಾರೆ. ಈ ಪ್ರಶಸ್ತಿ ಪಡೆದ ಭಾರತದ ಮೊದಲ ವಿಜ್ಞಾನಿ.
11. ಧ್ವನಿಯ ವೈಶಾಲ್ಯವನ್ನು (amplitude of sound)ಅಳೆಯುವ ಘಟಕ ?
- ಡೆಸಿಬಲ್
- ಕೊಲಂಬ್
- ಸೈಕಲ್
- ಆಂಪಿಯರ್
- ಶಬ್ದದ ತೀವ್ರತೆಯನ್ನು ಡೆಸಿಬಲ್ ಮೂಲಕ ಅಳೆಯಲಾಗುತ್ತದೆ. ಶಬ್ದದ ವೇಗವನ್ನು ಮಾಚ್ (Mach) ಎಂದು ಕ- ರೆಯುತ್ತಾರೆ. ಶಬ್ದದ ವೇಗವು ಅನಿಲಕ್ಕಿಂತ ಹೆಚ್ಚಾಗಿ ದ್ರವದಲ್ಲಿ ಮತ್ತು ದ್ರವಕ್ಕಿಂತ ಹೆಚ್ಚಾಗಿ ಘನ ವಸ್ತುಗಳಲ್ಲಿ ಕಂಡುಬರುತ್ತದೆ.
12. ಈ ಕೆಳಗಿನ ಯಾವ ರಾಜವಂಶವು, ಪಟ್ಟದಕಲ್ಲು ಮತ್ತು ಐಹೊಳೆಯಲ್ಲಿ ದೇವಾಲಯಗಳನ್ನು ನಿರ್ಮಿಸಿದೆ ?
- ಚಾಲುಕ್ಯ
- ಹೊಯ್ಸಳ
- ಶಾತವಾಹನ
- ರಾಷ್ಟ್ರಕೂಟ
ಬಾಗಲಕೋಟೆ ಜಿಲ್ಲೆಯಲ್ಲಿನ ಬಾದಾಮಿ (ವಾತಾಪಿ), ಐಹೊಳೆ & ಪಟ್ಟದಕಲ್ಲು ನಗರಗಳು ಮಲಪ್ರಭಾ ನದಿಯ ದಡದ ಮೇಲೆ ಕಂಡುಬರುತ್ತವೆ. ಈ ಮೂರು ಸ್ಥಳಗಳಲ್ಲಿನ ಪ್ರಮುಖ ದೇವಾಲಯಗಳನ್ನು ಬಾದಾಮಿ ಚಾಲುಕ್ಯರ ಕಾಲದಲ್ಲಿ ರಾಜರು ನಿರ್ಮಿಸಿದರು. 1986ರಲ್ಲಿ ಪಟ್ಟದಕಲ್ಲನ್ನು ಯುನೆಸ್ಕೋದ ಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ. ಬಾದಾಮಿಯು ಹೃದಯ್ ಯೋಜನೆಯಲ್ಲಿ ಆಯ್ಕೆಯಾದ ಒಂದು ಸ್ಥಳವಾಗಿದೆ. ಐಹೊಳೆ ಎಂಬುದು ವಾಸ್ತುಶಿಲ್ಪದ ತೊಟ್ಟಿಲು ಎನಿಸಿದೆ.
- ಹೊಯ್ಸಳರ ಕಾಲದ ಪ್ರಮುಖ ವಾಸ್ತುಶಿಲ್ಪ ಕೇಂದ್ರಗಳು: ಬೇಲೂರು ಹಳೇಬೀಡು, ದೊಡ್ಡ ಗದ್ದವನ ಹಳ್ಳಿ, ಸೋಮನಾಥಪುರ.
- ಈ ರಾಷ್ಟ್ರಕೂಟರ ಕಾಲದ |ನೇ ಕೃಷ್ಣನು ಎಲ್ಲೋರದಲ್ಲಿ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದನು.
- ಈ ಶಾತವಾಹನರ ಕಾಲದಲ್ಲಿ ಆಂಧ್ರಪ್ರದೇಶದ ಅಮರಾವತಿಯಲ್ಲಿ ಬೌದ್ಧರ ಕಲೆ & ವಾಸ್ತುಶಿಲ್ಪ ಶೈಲಿಯ ಸ್ತೂಪವು ನಿರ್ಮಾಣಗೊಂಡಿತು. ಶಾತವಾಹನರ ಮೂಲ ಪುರುಷ-ಸಿಮುಖ, ಪ್ರಸಿದ್ದ ಅರಸ – ಗೌತಮೀಪುತ್ರ ಶಾತಕರ್ಣಿ.
- ರಾಷ್ಟ್ರಕೂಟರ ಕಾಲದ ಪ್ರಮುಖ ವಾಸ್ತುಶಿಲ್ಪ ಕೇಂದ್ರಗಳು : ಎಲ್ಲೋರ, ಎಲಿಫೆಂಟಾ(ಗೊರವಪುರಿ ಮೊದಲ ಹೆಸರು), ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿ (ರಾಷ್ಟ್ರಕೂಟರ ಕಾಲದ ಪ್ರಮುಖ ವಿದ್ಯಾಕೇಂದ್ರ).
13. ಕರ್ನಾಟಕದಲ್ಲಿ ಜೈನ ಧರ್ಮದ ಹರಡುವಿಕೆಗೆ ಯಾರು ಕಾರಣ ಎಂದು ಪರಿಗಣಿಸಲಾಗಿದೆ ?
- ಅಜಾತಶತ್ರು
- ಚಂದ್ರಗುಪ್ತ ಮೌರ್ಯ
- ಬಿಂಬಸಾರ
- ಮಹಾ ಪದ್ಮಾನಂದ
- ಭಾರತದ ಪ್ರಥಮ ಅರಸ ಎನಿಸಿಕೊಂಡ ಚಂದ್ರಗುಪ್ತ ಮೌರ್ಯನು ಮೌರ್ಯ ಸಾಮ್ರಾಜ್ಯದ ಸಂಸ್ಥಾಪಕ. ಈತನು ತನ್ನ ಕೊನೆಯ ದಿನಗಳನ್ನು ಕರ್ನಾಟಕದ ಶ್ರವಣಬೆಳಗೊಳದಲ್ಲಿ ಸಲ್ಲೇಖನ ವ್ರತ ಕೈಗೊಂಡು ಪ್ರಾಣತ್ಯಾಗ ಮಾಡಿದನು. ಹೀಗಾಗಿ ಕರ್ನಾಟಕದಲ್ಲಿ ಜೈನ ಧರ್ಮದ ಹರಡುವಿಕೆಗೆ ಕಾರಣವಾದನು. ಹಾಸನ ಜಿಲ್ಲೆಯ ಶ್ರವಣ ಬೆಳಗೊಳ ಎಂಬುದು ಜೈನರ ವಾಸ್ತುಶಿಲ್ಪ ಕೇಂದ್ರವಾಗಿದೆ ಹಾಗೂ ವಿಶ್ವವಿಖ್ಯಾತ ಬಾಹುಬಲಿಯ ಮೂರ್ತಿ ಇಲ್ಲಿದೆ.
14. ಪೊಲೀಸ್ ಚಾಲನಾ ಮತ್ತು ನಿರ್ವಹಣಾ ಶಾಲೆ ಎಲ್ಲಿದೆ (Po-lice Driving & Maintenance School)?
- ಬೆಂಗಳೂರು
- ಮೈಸೂರು
- ಮಂಗಳೂರು
- ಬೆಳಗಾವಿ
- ಕರ್ನಾಟಕದ ಏಕೈಕ ಪೊಲೀಸ್ ಚಾಲನಾ ಮತ್ತು ನಿರ್ವಹಣಾ ಶಾಲೆಯು ಬೆಂಗಳೂರಿನ ಯಲಹಂಕದಲ್ಲಿದೆ. ಕರ್ನಾಟಕದ ಮೊದಲ ಪೊಲೀಸ್ ತರಬೇತಿ ಶಾಲೆಯು 1965 ರಲ್ಲಿ ಚನ್ನಪಟ್ಟಣದಲ್ಲಿ ಆರಂಭವಾಗಿದೆ. ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯು ತೆಲಂಗಾಣದ ಹೈದರಾಬಾದ್‌ನಲ್ಲಿದೆ. ಬೆಳಗಾವಿಯನ್ನು ಪದಾತಿ ದಳದ ತೊಟ್ಟಿಲು (ಕ್ರೆಡಲ್ ಆಫ್ ಇನ್ ಫೆಂಟರಿ) ಎನ್ನಲಾಗುತ್ತದೆ.
15. ಪ್ರದೇಶವಾರು, ಭಾರತದ ಅತಿದೊಡ್ಡ ರಾಜ್ಯ ಯಾವುದು?
- ರಾಜಸ್ಥಾನ
- ಗುಜರಾತ್
- ಮಧ್ಯಪ್ರದೇಶ
- ಆಂಧ್ರಪ್ರದೇಶ
- ಭಾರತವು ಜಗತ್ತಿನಲ್ಲಿ 7ನೇ ದೊಡ್ಡ ರಾಷ್ಟ್ರವಾಗಿದೆ. ಭಾರತದಲ್ಲಿ ವಿಸ್ತೀರ್ಣದ ಪ್ರಕಾರ ಅತಿ ರಾಜಸ್ಥಾನ ದೊಡ್ಡ ರಾಜ್ಯವಾಗಿದೆ. ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ. ಮಹಾರಾಷ್ಟ್ರ, ಉತ್ತರಪ್ರದೇಶ, ಗುಜರಾತ್ ಮತ್ತು ಕರ್ನಾಟಕ ರಾಜ್ಯಗಳಿವೆ. ಗೋವಾ ಪ್ರದೇಶವಾರು ಅತೀ ಚಿಕ್ಕ ರಾಜ್ಯವಾಗಿದೆ. ಜನಸಂಖ್ಯೆಯಲ್ಲಿ ಉತ್ತರ ಪ್ರದೇಶವು ಅತೀ ದೊಡ್ಡ ರಾಜ್ಯವಾದರೆ, ಸಿಕ್ಕಿಂ ರಾಜ್ಯವು ಅತಿ ಚಿಕ್ಕ ಜನಸಂಖ್ಯೆ ರಾಜ್ಯವಾಗಿದೆ. ಕರ್ನಾಟಕದಲ್ಲಿ ವಿಸ್ತೀರ್ಣವಾರು ಬೆಳಗಾವಿ ಅತಿ ದೊಡ್ಡ ಜಿಲ್ಲೆಯಾಗಿದೆ.
16.ನೀತಿ ಆಯೋಗ (NITI Aayog) ನ ವಿಸ್ತ್ರತ ರೂಪ?
- ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ
- ನ್ಯಾಷನಲ್ ಇನ್ ಸ್ಟಿಟ್ಯೂಶನ್ ಫಾರ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ
- ನ್ಯಾಷನಲ್ ಇನ್‌ಫಾಸ್ಟ್ರಕ್ಟರ್ ಫಾರ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ
- ನ್ಯಾಷನಲ್ ಇನ್ವೆಸ್ಟ್‌ಮೆಂಟ್ ಫಾರ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ
- National Institution for Transforming India (NITI Aayog) ವಿಸ್ತ್ರತ ರೂಪವಾಗಿದೆ. 1950ರ ಮಾರ್ಚ್ 15ರಂದು ಆರಂಭವಾದ ರಾಷ್ಟ್ರೀಯ ಯೋಜನಾ ಆಯೋಗಕ್ಕೆ ನರೇಂದ್ರ ಮೋದಿಯವರು 2015ರ ಜನವರಿ । ರಂದು ನೀತಿ ಆಯೋಗ ಎಂದು ಮರುನಾಮಕರಣ ಮಾಡಿದರು. ರಾಷ್ಟ್ರೀಯ ಯೋಜನಾ ಆಯೋಗದ ಕಾರ್ಯಗಳನ್ನು ಪ್ರಸ್ತುತ ನೀತಿ ಆಯೋಗ ನಿರ್ವಹಿಸುತ್ತದೆ. ಪ್ರಧಾನ ಮಂತ್ರಿಗಳು ಇದರ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ. ನೀತಿ ಆಯೋಗವು ಭಾರತದಲ್ಲಿ ನಾವೀನ್ಯತ ಸೂಚ್ಯಂಕ, ಆರೋಗ್ಯ ಸೂಚ್ಯಂಕ, ಜಲ ನಿರ್ವಹಣಾ ಸೂಚ್ಯಂಕಗಳನ್ನು ಪ್ರಕಟಿಸುತ್ತದೆ.
17. ಅಮೆಜಾನ್ ಮಳೆ ಕಾಡು ಯಾವ ಖಂಡದಲ್ಲಿದೆ ?
- ದಕ್ಷಿಣ ಅಮೆರಿಕ
- ಆಸ್ಟ್ರೇಲಿಯ
- ಉತ್ತರ ಅಮೆರಿಕ
- ಆಫ್ರಿಕಾ
- ಭೂಮಿಯ ಶ್ವಾಸಕೋಶ ಎಂದು ಕರೆಯಲ್ಪಡುವ ಮತ್ತು ಭೂಮಿಯ ಮೇಲಿನ ಅತಿ ದೊಡ್ಡ ಕಾಡಾದ ಅಮೆಜನ್ ಕಾಡು ದಕ್ಷಿಣ ಅಮೆರಿಕಾದ ಬ್ರೆಜಿಲ್, ಪೆರು, ಕೊಲಂಬಿಯಾ, ವೆನಿಜುವೆಲಾ, ಈಕ್ವೆಡಾರ್, ಬೊಲಾವಿಯಾಗಳಲ್ಲಿ ಹಂಚಿಕೆಯಾಗಿವೆ. ಈ ಕಾಡಿನಲ್ಲಿ ಅನಕೊಂಡ ಹಾವು, ಪಿದ್ದಾನ ಮೀನು ಮತ್ತು ಕಾಂಡರಾ ಪಕ್ಷಿ ಕಂಡುಬರುತ್ತದೆ. ದಕ್ಷಿಣ ಅಮೆರಿಕಾವನ್ನು ಟೊಳ್ಳುಭೂಮಿ, ಹುಲ್ಲುಗಾವಲುಗಳ ಭೂಮಿ, ಪಕ್ಷಿಗಳ ಖಂಡ ಎನ್ನುವರು. ಅಮೆಜಾನ್ ನದಿಯು ಜಗತ್ತಿನ ಅತ್ಯಂತ ದೊಡ ನದಿ. ನೈಲ್ ನದಿಯು ಜಗತ್ತಿನ ಅತ್ಯಂತ ಉದ್ದವಾದ ನದಿ.
18.ಇವುಗಳಲ್ಲಿ ಯಾವುದು ಸರ್ಚ್ ಇಂಜಿನ್ ?
- ಬಿಂಗ್
- ರೆಡ್ಡಿಟ್
- ಪಿಂಟರೆಸ್ಟ್
- ಇನ್ಸ್ಟಾಗ್ರಾಮ್
- ಬಿಂಗ್ ಎಂಬುದು ಮೈಕ್ರೋಸಾಫ್ಟ್ ಒಡೆತನದ ಸರ್ಚ್ ಇಂಜಿನ್ ಆಗಿದೆ. ಇದನ್ನು ಲೈವ್ ಸರ್ಚ್ ಬದಲಿಗೆ ಮೈಕ್ರೋಸಾಫ್ಟ್ ಸಂಸ್ಥೆಯು ಅಭಿವೃದ್ಧಿ ಪಡಿಸಿತ್ತು. ಜಗತ್ತಿನ ಇತರೆ ಸರ್ಚ್ ಇಂಜಿನ್‌ಗಳು Ya- hoo, Google Search, Bing, Yandex, Google, Baidu, Duck Duckgo ಮುಂತಾದವು. ಇನ್‌ಸ್ಟಾಗ್ರಾಂ ಎಂಬುದು ಫೇಸ್‌ಬುಕ್ ಒಡೆತನದ ಫೋಟೋ & ವಿಡಿಯೋ ಶೇರಿಂಗ್ ಸೋಷಿಯಲ್ ನೆಟ್‌ವರ್ಕಿಂಗ್, ಟ್ವಿಟರ್ : ಸೋಶಿಯಲ್ ನೆಟ್ ವರ್ಕಿಂಗ್.
19.ಕಂಪ್ಯೂಟರ್‌ನಲ್ಲಿನ ಲ್ಯಾಮ್ (Ram)ಅನ್ನು ಶಾರ್ಟ್ ಮೆಮೊರಿಯಾಗಿ ಬಳಸಲಾಗುತ್ತದೆ. ಏಕೆಂದರೆ ಅದು,
- ದುಬಾರಿ
- ಭಾಷ್ಪಶೀಲ
- ಪ್ರೊಗ್ರಾಮೆಬಲ್
- ಇವುಗಳಲ್ಲಿ ಯಾವುದೂ ಅಲ್ಲ
ಕಂಪ್ಯೂಟರ್‌ನಲ್ಲಿನ ರಾಮ್ (Ram- Random-access memory) (ಅಲ್ಪಾವಧಿ ಸ್ಮರಣಾಂಗ)ಯಾಗಿ ಬಳಸಲಾಗುತ್ತದೆ. ಕಾರಣ ಇದು ದುಬಾರಿ ಮತ್ತು ಪ್ರೋಗ್ರಾಮಬಲ್ ಆಗಿರದೇ ಭಾಷ್ಪಶೀಲ ಗುಣವನ್ನು ಹೊಂದಿರುತ್ತದೆ. ರ್ಯಾಮ್ ಎಂಬುದು ಕಂಪ್ಯೂಟರ್ ಮೆಮೋರಿಯ ಒಂದು ರೂಪವಾಗಿದ್ದು, ಇದನ್ನು ಯಾವುದೇ ಕ್ರಮದಲ್ಲಿ ಓದಬಹುದು & ಬದಲಾಯಿಸಬಹುದು. ಭಾಷ್ಪಶೀಲ ಗುಣವುಳ್ಳ ರಾಮ್‌ನಲ್ಲಿ ಸ್ಥಿರ ಯಾದೃಚಿಕ & ಚಲನಾತ್ಮಕ ಯಾದೃಚಿಕ ಎಂಬ 2 ವಿಧಗಳಿವೆ.
20. ಕ್ಲೋರೊಫಿಲ್ (Chlorophyll) ಸ್ವಾಭಾವಿಕವಾಗಿ ಸಂಭವಿಸುವ ಚಲೇಟ್ ಸಂಯುಕ್ತವಾಗಿದ್ದು ಇದರಲ್ಲಿ ಯಾವ ಕೇಂದ್ರ ಲೋಹವಿದೆ ?
- ತಾಮ್ರ
- ಕಬ್ಬಿಣ
- ಮೆಗ್ನೇಷಿಯಂ
- ಸಿಲಿಕಾ
ಸಸ್ಯಗಳ ಎಲೆಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಕ್ಲೋರೋಪ್ಲಾಸ್ಟ್ ಅಗತ್ಯವಿದೆ. ಕ್ಲೋರೋಪ್ಲಾಸ್ಟ್ ಹಸಿರು ಬಣ್ಣದಲ್ಲಿದ್ದು, ಇದರಲ್ಲಿ ಮೆಗ್ನಿಷಿಯಂ ಅಂಶ ಕಂಡುಬರುತ್ತದೆ. ಸ್ವಾಭಾವಿಕವಾಗಿ ಸಂಭವಿಸುವ ಚಲೇಟ್ ಕ್ಲೋರೊಫಿಲ್ ಸಂಯುಕ್ತವಾಗಿದ್ದು ಇದರಲ್ಲಿ ಮೆಗ್ನಿಷಿಯಂ ಲೋಹವಿದೆ. ದ್ಯುತಿಸಂಶ್ಲೇಷಣಾ ಕ್ರಿಯೆಯು ಸಸ್ಯದ ಭಾಗದಲ್ಲಿ ನಡೆಯುವ ಕ್ರಿಯೆ.
Pingback: ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳುವುದು?(police constable syllabus)