ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪ್ರಕ್ರಿಯೆ:
ಪೊಲೀಸ್ ಇಲಾಖೆಯಿಂದ ನೇಮಕಾತಿ ಅಧಿಸೂಚನೆ ಪ್ರಕಟ.
ಇಲಾಖಾ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ.
ಅಧೀಕೃತ ಬ್ಯಾಂಕ್ ಶಾಖೆಗಳ ಅಥವಾ ಅಂಚೆಕಚೇರಿಗಳಲ್ಲಿ ಪರೀಕ್ಷಾ ಶುಲ್ಕವನ್ನು ಪಾವತಿಸುವುದು ಮತ್ತು ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಪಡೆಯಲು ಅವಕಾಶ.
ನಿಗದಿತ ದಿನಾಂಕದಲ್ಲಿ ಲಿಖಿತ ಪರೀಕ್ಷೆ ನಡೆಸುವುದು.
ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ದೇಹದಾರ್ಡ್ಯತೆ ಪರೀಕ್ಷೆಗೆ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ.
ದೇಹದಾರ್ಡ್ಯತೆ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ಸಹಿಷ್ಣುತೆ ಪರೀಕ್ಷೆ ನಡೆಸುವುದು.
ಲಿಖಿತ ಪರೀಕ್ಷೆಯಲ್ಲಿ ಸ್ಪರ್ಧಾರ್ಥಿಗಳು ಪಡೆದ ಮೆರಿಟ್ ಅಂಕ ಆಧಾರದ ಮೇಲೆ ಹಾಗೂ ದೇಹದಾರ್ಡ್ಯತೆ, ಸಹಿಷ್ಣುತೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಮೆರಿಟ್ ಮತ್ತು ಮೀಸಲಾತಿಗೆ ಅನುಗುಣವಾಗಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸುತ್ತದೆ.
ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿರುವ ಎಲ್ಲಾ ಅಭ್ಯರ್ಥಿಗಳು ವೈದ್ಯಕೀಯ ಯ ಮಂಡಳಿ ನಡೆಸುವ ವೈದ್ಯಕೀಯ ಪರೀಕ್ಷೆಗೆ ಹಾಜರಾಗುವುದು.
ದೈಹಿಕವಾಗಿ ಅರ್ಹರೆಂದು ಪ್ರಮಾಣೀಕರಿಸದ ಅಭ್ಯರ್ಥಿಗಳ ಮೀಸಲಾತಿಗೆ ಅನುಗುಣವಾಗಿ ಅರ್ಹ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುತ್ತದೆ.
.
ವಿಶೇಷತೆ:
ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) (ಪುರುಷ & ಮಹಿಳಾ) ಹುದ್ದೆಗಳ ನೇಮಕಾತಿಯಲ್ಲಿ ಲಿಖಿತ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಆಯ್ಕೆ ನಡೆಯುತ್ತದೆ. ಈ ಪರೀಕ್ಷೆಯಲ್ಲಿ ಸ್ಪರ್ಧಾರ್ಥಿಗಳು ಪಿಯುಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸುವುದಿಲ್ಲ. ಈ ಪರೀಕ್ಷೆಗೆ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪರಿಗಣಿಸಲಾಗುತ್ತದೆ.
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ: ಕಾನ್ಸ್‌ಟೇಬಲ್ ಹುದ್ದೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಮಾಡಿದ ಅಭ್ಯರ್ಥಿಗಳಿಗೆ ಇಲಾಖೆಯು ನಿಗದಿಪಡಿಸಿದ ದಿನಾಂಕದಂದು ಲಿಖಿತ ಪರೀಕ್ಷೆಯನ್ನು ನಡೆಸುತ್ತದೆ. ಲಿಖಿತ ಪರೀಕ್ಷೆಯಲ್ಲಿ ಸ್ಪರ್ಧಾರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ ದೇಹದಾರ್ಡ್ಯತೆ ಪರೀಕ್ಷೆಗೆ ಆಹ್ವಾನಿಸುತ್ತದೆ.
ಪೊಲೀಸ್ ಕಾನ್ಸ್‌ಟೇಬಲ್ ಲಿಖಿತ ಪರೀಕ್ಷಾ ವಿಧಾನ
- ಪೊಲೀಸ್ ಕಾನ್ಸ್‌ಟೇಬಲ್ (ನಾಗರಿಕ) (ಪುರುಷ ಮತ್ತು ಮಹಿಳಾ) ಹುದ್ದೆಗಳಿಗೆ ಸಂಬಂಧಿಸಿದಂತೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆಯನ್ನು ನೀಡಲಾಗುತ್ತದೆ.
- ಪ್ರಶ್ನೆಗಳ ವಿಧ: ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಯು ವಸ್ತುನಿಷ್ಟ (Objective) ಮಾದರಿಯದಾಗಿದ್ದು, ಬಹುವಿಧ ಆಯ್ಕೆ (Multiple choice) ಉತ್ತರಗಳ ಲಿಖಿತ ಪರೀಕ್ಷೆ ಆಗಿರುತ್ತದೆ.
- ಒಟ್ಟು ಅಂಕಗಳು: 100 ಅಂಕಗಳು (ಪ್ರಶ್ನೆ ಪತ್ರಿಕೆಯಲ್ಲಿ ಒಟ್ಟು 100 ಪ್ರಶ್ನೆಗಳಿದ್ದು ಪ್ರತಿಯೊಂದು ಪ್ರಶ್ನೆಗೂ 1 ಅಂಕವನ್ನು ನಿಗದಿಪಡಿಸಲಾಗಿದೆ.)
- ಋಣಾತ್ಮಕ ಅಂಕಗಳು (Negative Marks): ಅಭ್ಯರ್ಥಿಯು ಗಳಿಸಿದ ಪ್ರತಿ ಸರಿ ಉತ್ತರಕ್ಕೆ 1.00 ಅಂಕವನ್ನು ನೀಡಲಾಗುವುದು. ಮತ್ತು ತಪ್ಪು ಉತ್ತರಕ್ಕೆ 0.25 ಅಂಕವನ್ನು ಕಳೆಯಲಾಗುವುದು.
- ಪರೀಕ್ಷಾ ಅವಧಿ: ಲಿಖಿತ ಪರೀಕ್ಷೆ ಗರಿಷ್ಠ ಸಮಯ 1 1/2 ಗಂಟೆ. (90 ನಿಮಿಷಗಳು) ಆಗಿರುತ್ತದೆ.
1. ದೇಹದಾರ್ಢ್ಯತೆ ಪರೀಕ್ಷೆ (Physical Standard Test)
ಲಿಖಿತ ಪರೀಕ್ಷೆಯಲ್ಲಿ 1:50 ಅನುಪಾತದಡಿ ಅರ್ಹಗೊಂಡ ಅಭ್ಯರ್ಥಿಗಳಿಗೆ ದೇಹದಾರ್ಡ್ಯತೆ ಪರೀಕ್ಷೆ (Physical Stan dard Test) ಮತ್ತು ಸಹಿಷ್ಣುತೆ ಪರೀಕ್ಷೆ (Endurance Test) ಗಳನ್ನು ನಡೆಸಲಾಗುವುದು:
- ಎಲ್ಲಾ ಸಾಮಾನ್ಯ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ಕನಿಷ್ಠ ಎತ್ತರ: 168 ಸೆಂ. ಮೀ. ಕನಿಷ್ಠ ಎದೆ ಸುತ್ತಳತೆ : 86 ಸೆಂ. ಮೀ (ಪೂರ್ತಿ ವಿಸ್ತರಿಸಿದಾಗ) ಕನಿಷ್ಟ ವಿಸ್ತರಣೆ 5 ಸೆಂ. ಮೀ.
- ಮಹಿಳಾ ಅಭ್ಯರ್ಥಿಗಳಿಗೆ : ಕನಿಷ್ಠ ಎತ್ತರ: 157 ಸೆಂ. ಮೀ. ಕನಿಷ್ಠ ತೂಕ : 45 ಕೆ.ಜಿ.
- ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಪುರುಷ ಅಭ್ಯರ್ಥಿಗಳಿಗೆ : ಕನಿಷ್ಠ ಎತ್ತರ: 155 ಸೆಂ. ಮೀ. ಎದೆ ಸುತ್ತಳತೆ: 5 ಸೆಂ.ಮೀ.ಗಳ ಕನಿಷ್ಠ ವಿಸ್ತರಿಸುವುದರೊಂದಿಗೆ ಸಂಪೂರ್ಣವಾಗಿ ಹಿಗ್ಗಿಸಿದಾಗ 75 ಸೆಂ.ಮೀ.ಗಳಿಗಿಂತ ಕಡಿಮೆ ಇಲ್ಲದಂತೆ.
- ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಮಹಿಳಾ ಅಭ್ಯರ್ಥಿಗಳಿಗೆ : ಕನಿಷ್ಠ ಎತ್ತರ: 150 ಸೆಂ. ಮೀ.
ಸಹಿಷ್ಣುತೆ ಪರೀಕ್ಷೆ (Endurance Test) : ಮೇಲಿನ ದೇಹದಾರ್ಡ್ಯತೆ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳು ಈ ಕೆಳಗಿನ ಎಲ್ಲಾ ಸಹಿಷ್ಣುತೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು ಹಾಗೂ ಈ ಕೆಳಗಿನ ಎಲ್ಲಾ ಸಹಿಷ್ಣುತೆ ಪರೀಕ್ಷೆಗಳನ್ನು ಈ ಕೆಳಗೆ ನಮೂದಿಸಿರುವ ಕ್ರಮದಲ್ಲಿಯೇ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ. ಈ ಪರೀಕ್ಷೆಗಳಲ್ಲಿ ಭಾಗವಹಿಸುವುದನ್ನು ತಿರಸ್ಕರಿಸುವವರು/ ವಿಫಲವಾಗುವವರು ಅನರ್ಹತೆಗೆ ಒಳಗಾಗುವರು. ಸಹಿಷ್ಣುತೆ ಪರೀಕ್ಷೆಗೆ ಅಂಕಗಳನ್ನು ನೀಡಲಾಗುವುದಿಲ್ಲ. ಇವು ಕೇವಲ ಅರ್ಹತೆಗೆ ಮಾತ್ರ ಸೀಮಿತವಾಗಿರುತ್ತದೆ.
2. ಸಹಿಷ್ಣುತೆ ಪರೀಕ್ಷೆ(Endurance Test)
ಎಲ್ಲಾ ಸಾಮಾನ್ಯ ಪುರುಷ ಅಭ್ಯರ್ಥಿಗಳಿಗೆ
ಎತ್ತರ ಜಿಗಿತ ಅಥವಾ ಉದ್ದ ಜಿಗಿತ
ಗುಂಡು ಎಸೆತ (7.26 ಕೆ.ಜಿ)
3.90 ಮೀಟರ್‌ಗಿಂತ ಕಡಿಮೆ ಇಲ್ಲದಂತೆ / 2.50 ಮೀಟರ್ ಗಿಂತ ಕಡಿಮೆ ಇಲ್ಲದಂತೆ (3 ಅವಕಾಶಗಳು ಮಾತ್ರ)
1.20 ಮೀಟರ್‌ಗಿಂತ ಕಡಿಮೆ ಇಲ್ಲದಂತೆ ಅಥವಾ 3.80 ಮೀಟರ್ ಗಿಂತ ಕಡಿಮೆ ಇಲ್ಲದಂತೆ (3 ಅವಕಾಶಗಳು ಮಾತ್ರ)
ಮಹಿಳಾ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ
400 ಮೀಟರ್ ಓಟ
ಎತ್ತರ ಜಿಗಿತ ಅಥವಾ ಉದ್ದ ಜಿಗಿತ
ಗುಂಡು ಎಸೆತ (4 ಕೆ.ಜಿ.)
2 ನಿಮಿಷಕ್ಕಿಂತ ಮೀರದಂತೆ
0.90 ಮೀಟರ್‌ಗಿಂತ ಕಡಿಮೆ ಇಲ್ಲದಂತೆ / 2.50 ಮೀಟರ್ ಗಿಂತ ಕಡಿಮೆ ಇಲ್ಲದಂತೆ (3 ಅವಕಾಶಗಳು ಮಾತ್ರ)
3.75 ಮೀಟರ್ ಗಿಂತ ಕಡಿಮೆ ಇಲ್ಲದಂತೆ (3 ಅವಕಾಶಗಳು ಮಾತ್ರ)
3. ವೈದ್ಯಕೀಯ ಪರೀಕ್ಷೆ (Medical Test)
ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಿದ ನಂತರ ವೈದ್ಯಕೀಯ ಮಂಡಳಿಯ ಮುಂದೆ ವೈದ್ಯಕೀಯ ಪರೀಕ್ಷೆಗೆ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಅರ್ಹಗೊಳ್ಳುವ ಎಲ್ಲಾ ಅಭ್ಯರ್ಥಿಗಳ ಹಾಜರಾಗಬೇಕಾಗುತ್ತದೆ. ವೈದ್ಯಕೀಯ ಪರೀಕ್ಷೆಗಳಲ್ಲಿ ದೃಷ್ಟಿ, ಶ್ರವಣ ಶಕ್ತಿ, ಅಪಧಮನಿ ಊತ ಸಹ ಅನರ್ಹತೆ, ಮಾತಿನಲ್ಲಿ ಆಡಚಣೆ ಸಹ ಅನರ್ಹತೆ, ಎದೆಯ ಕ್ಷ-ಕಿರಣ ಪರೀಕ್ಷೆ ಹಾಗೂ ಇತರ ಯಾವುದೇ ದೈಹಿಕ ಅಥವಾ ಮಾನಸಿಕ ನ್ಯೂನತೆ ಪರೀಕ್ಷೆಗೆ ನಡೆಸಲಾಗುತ್ತದೆ. ದೈಹಿಕವಾಗಿ ಆರ್ಹರೆಂದು ಪ್ರಮಾಣೀಕರಿಸದ ವರದಿಯ ಆಧಾರದ ಮೇಲೆ ಮುಂದಿನ ಪಕ್ರಿಯೆ ಜರುಗುತ್ತದೆ.