- ಕರ್ನಾಟಕದ ಶಾಲಾ ಶಿಕ್ಷಣದ ಆಧಾರಿತ ಪ್ರಶ್ನೋತ್ತರಗಳ ಸಂಗ್ರಹವು ಸ್ಪರ್ಧಾರ್ಥಿಗಳಿಗೆ ಅತ್ಯುತ್ತಮ ಅಧ್ಯಯನ ಸಂಪನ್ಮೂಲವಾಗಿದೆ. ಈ ಸಂಗ್ರಹವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳಿಗೆ ಮತ್ತು ಓದುಗರಿಗೆ ಉಪಯುಕ್ತವಾಗಿರುವ ಹಲವಾರು ಪ್ರಶ್ನೋತ್ತರಗಳನ್ನು ಒಳಗೊಂಡಿದೆ. ವಿಷಯ ನಿರ್ಧಾರ, ಪ ಠ್ಯಾಂಶ ಆಧಾರಿತ ಪ್ರಶ್ನೆಗಳು(school education Karnataka), ಮತ್ತು ಅವರ ಸಮಗ್ರ ಉತ್ತರಗಳು ಇಲ್ಲಿವೆ.
- ಸ್ಪರ್ಧಾರ್ಥಿಗಳು ಈ ಸಂಗ್ರಹವನ್ನು ಬಳಸಿಕೊಂಡು ಪರೀಕ್ಷಾ ಸಿದ್ಧತೆಗೆ ಸಹಾಯ ಮಾಡಿಕೊಳ್ಳಬಹುದು. ತಯಾರಿ ನಿರ್ವಹಿಸಲು ಹೀಗೆ ರೂಪುಗೊಳ್ಳುವ ಪ್ರಶ್ನೋತ್ತರಗಳು ಸ್ಪರ್ಧಾರ್ಥಿಗಳಿಗೆ ತ್ವರಿತದಲ್ಲಿ ವಿಷಯದ ಅಂತಃಸ್ಥಳವನ್ನು ಗ್ರಹಿಸಲು ನೆರವಾಗುತ್ತದೆ. ಈ ಸಂಗ್ರಹವು ಕರ್ನಾಟಕದ ಪಠ್ಯಕ್ರಮವನ್ನು(school education Karnataka) ಆಧರಿಸಿದ ತಜ್ಞರಿಂದ ರೂಪಿಸಲಾಗಿದೆ, ಇದರಿಂದ ಸ್ಪರ್ಧಾರ್ಥಿಗಳು ಅವರ ಪಠ್ಯವನ್ನು ಸಮರ್ಥವಾಗಿ ಅಧ್ಯಯನ ಮಾಡಬಹುದು.
1.ಇವರ ಪೂರ್ವಾನುಮತಿಯಿಲ್ಲದೆ ಲೋಕಸಭೆಯಲ್ಲಿ ಯಾವುದೇ ಹಣ ಮಸೂದೆ (money bill)ಯನ್ನು ಪರಿಚಯಿಸಲಾಗುವುದಿಲ್ಲ?
- ರಾಷ್ಟ್ರಪತಿ
- ಪ್ರಧಾನಮಂತ್ರಿ
- ಉಪ ರಾಷ್ಟ್ರಪತಿ
- ಹಣಕಾಸು ಮಂತ್ರಿ
- ಸಂವಿಧಾನದ 112ನೇ ವಿಧಿಯನ್ವಯ ಕೇಂದ್ರ ಹಣಕಾಸು ಸಚಿವರು ಲೋಕಸಭೆಯಲ್ಲಿ ಮಾತ್ರ ಹಣ ಮಸೂದೆಯನ್ನು ಮಂಡಿಸುತ್ತಾರೆ. ಇದಕ್ಕೂ ಮುನ್ನ ರಾಷ್ಟ್ರಪತಿಗಳ ಅಂಗೀಕಾರ ಕಡ್ಡಾಯವಾಗಿರುತ್ತದೆ. ರಾಷ್ಟ್ರಪತಿಗಳ ಒಪ್ಪಿಗೆಯಿಲ್ಲದೆ ಯಾವುದೇ ಹಣಕಾಸು ಮಸೂದೆಯನ್ನು ಸರ್ಕಾರವು ಮಂಡಿಸುವಂತಿಲ್ಲ. ಭಾರತದ ಖಜಾನೆ ಕಾಯುವ ಕಾವಲು ನಾಯಿ ಸಂಸ್ಥೆಯೆಂದು ಸಿಎಜಿ (ಕಂಪ್ಯೂಲರ್ & ಆಡಿಟರ್ ಜನರಲ್ ) ಅವರನ್ನು ಕರೆಯುತ್ತಾರೆ.
2. ಭಕ್ತಿ ಚಳವಳಿಯ ಕೆಳಗಿನ ಯಾವ ಅಂಶವು ಸೂಫಿ ಸಂತನೊಂದಿಗೆ ಸಾಮಾನ್ಯವಾಗಿದೆ?
- ಒಂದೇ ದೇವರನ್ನು ನಂಬಿ
- ಆಚರಣೆ & ವರ್ಗ ವಿಭಾಗದ ನಿರಾಕರಣೆ
- ಎಲ್ಲಾ ಪುರುಷರ ಸಮಾನತೆ ಮತ್ತು ಸಹೋದರತ್ವ
- ಇವುಗಳಲ್ಲಿ ಎಲ್ಲವೂ
- ಭಕ್ತಿ ಚಳವಳಿಯ ಕಾಲದ ಒಂದೇ ದೇವರನ್ನು ನಂಬಿ, ಎಲ್ಲಾ ಪುರುಷರ ಸಮಾನತೆ ಮತ್ತು ಸಹೋದರತ್ವ, ಆಚರಣೆ ಮತ್ತು ವರ್ಗ ವಿಭಾಗದ ನಿರಾಕರಣೆ ಮುಂತಾದ ಅಂಶಗಳು ಸೂಫಿಸಂತನೊಂದಿಗೆ ಸಾಮಾನ್ಯವಾಗಿದೆ. ಸೂಫಿ ಎಂಬುದು ಪರ್ಶಿಯಾದಿಂದ ಭಾರತಕ್ಕೆ ಬಂದ ಮುಸ್ಲಿಂ ಸಂತರನ್ನು ತಿಳಿಸುತ್ತದೆ. ಇಸ್ಲಾಂ ಧರ್ಮದ ಆಧ್ಯಾತ್ಮಿಕತೆ- ಯ ಮತ್ತೊಂದು ಹೆಸರು, ಸೂಫಿ ಪಂಥವು ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಕುರಾನ್ ಮೂಲಾಧಾರವಾಗಿದೆ. ಚಿಸ್ತಿ ಪಂಗಡ ಮತ್ತು ಸುರ್ಹಾವರ್ದಿ ಪಂಗಡಗಳು ಸೂಫಿ ಪಂಥದಲ್ಲಿ ಕಂಡುಬರುತ್ತವೆ.
3. ಭಾರತ ಮತ್ತು ಯಾವ ದೇಶ ಜಂಟಿ ಮಿಲಿಟರಿ ವ್ಯಾಯಾಮ "Shinyuu Maitri" ವನ್ನು ಆಯೋಜಿಸುತ್ತಿದೆ ?
- ನೇಪಾಳ
- ಚೀನಾ
- ರಷ್ಯಾ
- ಜಪಾನ್
- 2019ರ ಅಕ್ಟೋಬರ್ 17 ರಿಂದ 23ರವರೆಗೆ ಪಶ್ಚಿಮಬಂಗಾಳದ ಪನಗರ್ ನಗರದಲ್ಲಿ ಜಪಾನ್ ಮತ್ತು ಭಾರತದ ವಾಯು ಸೇನೆಗಳ ನಡುವೆ Shinyuu Maitri ಹೆಸರಿನಲ್ಲಿ ಸಮರಾಭ್ಯಾಸ ಜರುಗಿತು. ಭಾರತವು ನೇಪಾಳದೊಂದಿಗೆ ಸೂರ್ಯಕಿರಣ ಸಮರಾಭ್ಯಾಸ, ಚೀನಾದೊಂದಿಗೆ ಹ್ಯಾಂಡ್ ಟು ಹ್ಯಾಂಡ್ ಮತ್ತು ರಷ್ಯಾದೊಂದಿಗೆ ಇಂದ್ರ ಸಮರಾಭ್ಯಾಸವನ್ನು ನಡೆಸುತ್ತದೆ. 2021ರ ಮಾರ್ಚ್ನಲ್ಲಿ ಹಿಮಾಚಲ ಪ್ರದೇಶದ ಬಾಕ್ಲೋನಲ್ಲಿ ಭಾರತ ಮತ್ತು ಅಮೆರಿಕಾದ ಜಂಟಿ ವಿಶೇಷ ಪಡೆಗಳ ನಡುವೆ ವಜ್ರಪ್ರಹಾರ ಹೆಸರಿನ ಸಮರಾಭ್ಯಾಸ ಜರುಗಿತು. ಯುದ್ಧಾಭ್ಯಾಸ (ಭಾರತ & ಅಮೆರಿಕಾದ ನಡುವೆ)
4. ಯಾರ ಜನನ ವಾರ್ಷಿಕೋತ್ಸವವನ್ನು ಸದ್ಭಾವನಾ ದಿವಸ ಮತ್ತು ಮರಣ ವಾರ್ಷಿಕೋತ್ಸವವನ್ನು ಭಯೋತ್ಪಾದನಾ ವಿರೋಧಿ ದಿನವೆಂದು ಆಚರಿಸಲಾಗುತ್ತದೆ ?
- ಇಂದಿರಾಗಾಂಧಿ
- ರಾಜೀವ್ ಗಾಂಧಿ
- ಮಹಾತ್ಮಗಾಂಧಿ
- ಸಂಜಯ್ ಗಾಂಧಿ
- ಭಾರತದ ಅತಿ ತರುಣ ಪ್ರಧಾನಿ ಖ್ಯಾತಿಯ ರಾಜೀವ್ ಗಾಂಧಿಯವರು 1944ರ ಆಗಸ್ಟ್ 20ರಂದು ಮುಂಬೈನಲ್ಲಿ ಜನಿಸಿದರು. ಈ ಕಾರಣದಿಂದ ಆಗಸ್ಟ್ 20ನ್ನು ರಾಷ್ಟ್ರೀಯ ಸದ್ಭಾವನಾ ದಿನವೆಂದು ಆಚರಿಸಲಾಗುತ್ತದೆ. 1991ರ ಮೇ 21 ರಂದು ತಮಿಳುನಾಡಿನ ಪೆರಂಬದೂರು ಬಳಿ ಎಲ್ಟಿಟಿ ಇ ಉಗ್ರರಿಂದ ರಾಜೀವ್ ಗಾಂಧಿ ಅವರು ಹತ್ಯೆಯಾದರು. ಹೀಗಾಗಿ ಮೇ 21ರ ದಿನವನ್ನು ರಾಷ್ಟ್ರೀಯ ಭಯೋತ್ಪಾದನ ನಿಗ್ರಹ ದಿನವೆಂದು ಆಚರಿಸಲಾಗುತ್ತದೆ. ವೀರಭೂಮಿ ಎಂಬುದು ರಾಜೀವ್ ಗಾಂಧಿ ಅವರ ಸಮಾಧಿ ಸ್ಮಾರಕವಾಗಿದೆ. (ಅಕ್ಟೋಬರ್ 2 – ಅಂತರಾಷ್ಟ್ರೀಯ ಅಹಿಂಸಾ ದಿನ, ಗಾಂಧೀಜಿ ಜನ್ಮ ದಿನ)
5. ಭಾರತದ ಮೊದಲ ಕಾರ್ಪೋರೇಟ್ ರೈಲು 'ತೇಜಸ್ ಎಕ್ಸ್ಪ್ರೆಸ್' ಇವುಗಳ ನಡುವ ಚಲಿಸುತ್ತದೆ' ?
- ಲಕ್ನೋ -ಗುವಾಹಟಿ
- ಲಕ್ನೋ -ಮುಂಬೈ
- ಬಕ್ಕೋ-ಭೋಪಾಲ್
- ಲಕ್ನೋ -ನವದೆಹಲಿ
- ಭಾರತ ದೇಶದ ಮೊಟ್ಟ ಮೊದಲ ಖಾಸಗಿ ರೈಲು ತೇಜಸ್ ಎಕ್ಸ್ಪ್ರೆಸ್ ಎಂಬುದು ಉತ್ತರ ಪ್ರದೇಶದ ಲಕ್ಕೋ ನವದೆಹಲಿ ಮಾರ್ಗದಲ್ಲಿ ಸಂಚರಿಸುತ್ತಿದೆ. 2019 ಅಕ್ಟೋಬರ್ 4 ರಂದು ಮೊದಲ ಬಾರಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ. ಭಾರತದ ಸೆಮಿ ಅತಿ ವೇಗದ ಪೂರ್ಣ ಎಸಿ ವ್ಯವಸ್ಥೆಯುಳ್ಳ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಮತ್ತು ಸೇವೆಗಳನ್ನು ಒಳಗೊಂಡಿರುವ ಈ ರೈಲನ್ನು ಭೂಮಿಯ ಮೇಲೆ ಚಲಿಸುವ ವಿಮಾನ ಎನ್ನುವರು.
6. ಭಾರತೀಯ ವಾಯುಸೇನೆಯನ್ನು ಮೊದಲು ಈ ವರ್ಷದಲ್ಲಿ ಸ್ಥಾಪಿಸಲಾಯಿತು ?
- 1956
- 1948
- 1932
- 1963
- ಭಾರತೀಯ ವಾಯುಸೇನೆಯನ್ನು ಮೊದಲು 1932ರ ಅಕ್ಟೋಬರ್ 8 ರಂದು ಸ್ಥಾಪಿಸಲಾಯಿತು. ಆದ್ದರಿಂದ ಅಕ್ಟೋಬರ್ 8ನ್ನು ವಾಯುಪಡೆ ದಿನವನ್ನಾಗಿ ಆಚರಿಸಲಾಗುತ್ತದೆ.
- ಸೇನಾ ವಿಭಾಗ : ಭೂಸೇನೆ
- ಸ್ಥಾಪನೆ : 1895
- ಪ್ರಸುತ ಮುಖ್ಯಸ್ಥರು : ಜೆನರಲ್ ಮನೋಜ್ ಪಾಂಡೆ
- ದಿನಾಚರಣೆ : ಜನವರಿ 15
- ಸೇನಾ ವಿಭಾಗ : ನೌಕಾ ಪಡೆ
- ಸ್ಥಾಪನೆ : 1890
- ಪ್ರಸುತ ಮುಖ್ಯಸ್ಥರು : ದಿನೇಶ್ ಕುಮಾರ್ ತ್ರಿಪಾಠಿ
- ದಿನಾಚರಣೆ : ಡಿಸೆಂಬರ್ 4
- ಸೇನಾ ವಿಭಾಗ : ವಾಯುಪಡೆ
- ಸ್ಥಾಪನೆ : 1932
- ಪ್ರಸುತ ಮುಖ್ಯಸ್ಥರು : ಮಾರ್ಷಲ್ ವಿ,ಆರ್ ಚೌಧರಿ
- ದಿನಾಚರಣೆ : ಅಕ್ಟೋಬರ್ 8
6. ಕನ್ನಡ ಸಾಹಿತ್ಯ ಪರಿಷತ್ ಅನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು ?
- 1904
- 1908
- 1915
- 1920
- ಮೈಸೂರು ಸಾಮ್ರಾಜ್ಯದ ನಾಲ್ವಡಿ ಕೃಷ್ಣದೇವ ಒಡೆಯರ ಕಾಲದಲ್ಲಿ ವಿಶ್ವೇಶ್ವರಯ್ಯನವರು ದಿವಾನರಾಗಿದ್ದ ಸಂದರ್ಭದಲ್ಲಿ (1912-18) ಕ.ಸಾ.ಪ. 1915ರಲ್ಲಿ ಸ್ಥಾಪನೆಯಾಯಿತು. 2021ರಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನವು ಹಾವೇರಿಯಲ್ಲಿ ಸಾಹಿತಿ ದೊಡ್ಡರಂಗೇಗೌಡ ಅಧ್ಯಕ್ಷತೆಯಲ್ಲಿ ಜರುಗಿದೆ. (85ನೇ ಸಮ್ಮೇಳನ – ಕಲಬುರಗಿ)
7. ರೇಡಿಯೋ ಕಾರ್ಬನ್ ಡೇಟಿಂಗ್ ತಂತ್ರಜ್ಞಾನವನ್ನು ಮುಖ್ಯವಾಗಿ ಯಾವುದರ ವಯಸ್ಸನ್ನು ಅಂದಾಜು ಮಾಡಲು ಬಳಸಲಾಗುತ್ತದೆ ?
- ಬಂಡೆಗಳು
- ಪಳೆಯುಳಿಕೆಗಳು
- ಸ್ಮಾರಕಗಳು
- ಮಣ್ಣು
ಪಳೆಯುಳಿಕೆಗಳ ಆಯಸ್ಸನ್ನು ಕಂಡು ಹಿಡಿಯಲು c-14 (carben-14) test ನಡೆಸಲಾಗುತ್ತದೆ. ಇದರಲ್ಲಿ ರೇಡಿಯೋ ಕಾರ್ಬನ್ ಡೇಟಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿರುತ್ತದೆ.
8. ಈ ಕೆಳಗಿನವರುಗಳಲ್ಲಿ, ನಾಡಗೀತೆ "ಭಾರತ ಜನನೀಯ ತನುಜಾತೆ'ಯ ಲೇಖಕರು ಯಾರು ?
- ಗೋಪಾಲಕೃಷ್ಣ ಅಡಿಗ
- ಗೋವಿಂದರಾಯ ನಾಯಕ
- ಕೆ.ಎಸ್. ಕಾರಂತ್
- ಕುವೆಂಪು
- ರಾಷ್ಟ್ರಕವಿ ಕುವೆಂಪುರವರು ಕನ್ನಡ ನಾಡಗೀತೆಯ ಲೇಖಕರು. ಇವರು 1904ರ ಡಿಸೆಂಬರ್ 29ರಂದು ಜನಿಸಿದರು. ಹೀಗಾಗಿ ಡಿಸೆಂಬರ್ 29ನ್ನು ವಿಶ್ವ ಮಾನವ ದಿನ ಎಂದು ಆಚರಿಸಲಾಗುತ್ತದೆ. ಇವರ ಜನ್ಮ ಶತಮಾನೋತ್ಸವ ಪ್ರಯುಕ್ತವಾಗಿ 2004 ಜನವರಿ 6ರಂದು ಜಯ ಭಾರತ ಜನನಿಯ ತನುಜಾತೆ ಗೀತೆಯನ್ನು ನಾಡಗೀತೆಯಾಗಿ ಘೋಷಿಸಲಾಯಿತು. ರೈತಗೀತೆ – ನೇಗಿಲ ಹಿಡಿದು ಹೊಲದೊಲು ಹಾಡುತಾ ಉಳುವ ಯೋಗಿ ಬರೆದವರು : ಕುವೆಂಪು
9. ಉಪರಾಷ್ಟ್ರಪತಿಯ ಅಧಿಕಾರ ಅವಧಿ ಎಷ್ಟು ?
- 6 ವರ್ಷಗಳು
- 7ವರ್ಷಗಳು
- 5 ವರ್ಷಗಳು
- 4 ವರ್ಷಗಳು
- ಸಂವಿಧಾನದ 67ನೇ ವಿಧಿಯನ್ವಯ ಉಪರಾಷ್ಟ್ರಪತಿಯು ಪ್ರಮಾಣವಚನ ಸ್ವೀಕರಿಸಿದ ದಿನದಿಂದ 5 ವರ್ಷಗಳ ಕಾಲ ಅಧಿಕಾರ ಹೊಂದಿರುತ್ತಾರೆ. ಇವರು ಸಂಸತ್ತಿನ ಎರಡೂ ಸದನಗಳ ಎಲ್ಲಾ ಸದಸ್ಯರಿಂದ ಆಯ್ಕೆಯಾಗುತ್ತಾರೆ. ಉಪರಾಷ್ಟ್ರಪತಿಗಳು ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ. (ರಾಜ್ಯಸಭೆಯ ಸದಸ್ಯರ ಅವಧಿಯು 6 ವರ್ಷಗಳಾಗಿರುತ್ತದೆ.)
10. ಈ ಕೆಳಗಿನ ಯಾವ ನಗರವು ಕಮಿಷನರೇಟ್ ಪೊಲೀಸ್ ವ್ಯವಸ್ಥೆಯನ್ನು ಹೊಂದಿದೆ ?
- ಬೆಳಗಾವಿ
- ಕಲ್ಬುರ್ಗಿ
- ಮೈಸೂರು
- ಎಲ್ಲವು
- ಕರ್ನಾಟಕದಲ್ಲಿ ಪ್ರಸ್ತುತ ಕಮಿಷನರೇಟ್ಗಳಿವೆ. 6 ಅವುಗಳೆಂದರೆ, ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ. ಕರ್ನಾಟಕ ರಾಜ್ಯದಲ್ಲಿ ದಕ್ಷಿಣ, ಪಶ್ಚಿಮ, ಪೂರ್ವ, ಕೇಂದ್ರ, ಉತ್ತರ, ಈಶಾನ್ಯ ವಲಯಗಳು ಮತ್ತು ಬಳ್ಳಾರಿ ವಲಯ ಇವೆ. ನಗರಗಳಲ್ಲಿ ಪೊಲೀಸ್ ವ್ಯವಸ್ಥೆ ಉಸ್ತುವಾರಿಗೆ ಪೊಲೀಸ್ ಕಮಿಷನರ್ಗಳನ್ನು ನೇಮಿಸಲಾಗುತ್ತದೆ. ಬಿಸಿಪಿ ಎಂಬುದು ಬೆಂಗಳೂರು ಸಿಟಿ ಪೊಲೀಸ್ ವ್ಯವಸ್ಥೆ. 34ನೇ ಬಿಸಿಪಿ ಕಮಿಷನರ್ – ಕಮಲ್ ಪಂತ್
- ಈ ಸಂಪನ್ಮೂಲವು ಉಪಯುಕ್ತವಾದ ಪ್ರಶ್ನೆಗಳ ಮೂಲಕ ಸ್ಪರ್ಧಾರ್ಥಿಗಳಿಗೆ ಅಂತರಂಗದ ತಿಳಿವಳಿಕೆಯನ್ನು ವೃದ್ಧಿಸಲು ಮತ್ತು ಅವರ ಪರೀಕ್ಷಾ ಫಲಿತಾಂಶಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಂತಹ ಫಲಿತಾಂಶಗಳನ್ನು ಸಾಧಿಸಲು, ಈ ತಂತ್ರವನ್ನು ಅನುಸರಿಸುವುದು ಬಹುಮುಖ್ಯವಾಗಿದೆ. ಈ ಸಂಗ್ರಹವು ವಿದ್ಯಾರ್ಥಿಗಳನ್ನು ಅಧ್ಯಯನದಲ್ಲಿ ತೊಡಗಿಸಿಕೊಂಡು, ಅವರಿಗೆ ಹತ್ತಿರದ ಸ್ಪರ್ಧಾರ್ಥಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಪೂರಕವಾಗಿದೆ.
11. ಈ ಕೆಳಗಿನ ಎರಡು ನಕ್ಷತ್ರದ ಚಿಹ್ನೆಯನ್ನು ಯಾರು ಧರಿಸುತ್ತಾರೆ ?
- ಪೊಲೀಸ್ ಇನ್ಸ್ಪೆಕ್ಟರ್
- ಪೊಲೀಸ್ ಸಬ್ ಇನ್ಸ್ಪೆಕ್ಟರ್( police sub inspector)
- ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್
- ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಆಫ್ ಪೊಲೀಸ್
- ಅಸಿಸ್ಟಂಟ್ ಸಬ್ ಇನ್ಸ್ಪೆಕ್ಟರ್ ಆಫ್ ಪೊಲೀಸ್ ಒಂದು ನಕ್ಷತ್ರದ ಚಿಹ್ನೆಯನ್ನು, ಪೊಲೀಸ್ ಸಬ್ ಇನ್ಸ್ಪೆಕ್ಟರ್ 2 ನಕ್ಷತ್ವದ ಚಿಹ್ನೆಯನ್ನು, ಪೊಲೀಸ್ ಇನ್ಸಪೆಕ್ಟರ್ ಮೂರು ನಕ್ಷತ್ರದ ಚಿಹ್ನೆಯನ್ನು ಮತ್ತು ಕೆಎಸ್ಪಿ ಎಂಬ ಬ್ಯಾಡ್ಜ್ ಹೊಂದಿರುತ್ತಾರೆ. ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ನಕ್ಷತ್ರದ ಚಿಹ್ನೆಗಳೊಂದಿಗೆ ಕೆ.ಎಸ್.ಪಿ.ಎಸ್. ಎಂಬ ಬ್ಯಾಡ್ಜ್ ಹೊಂದಿರುತ್ತಾರೆ. ಪಿ.ಎಸ್.ಐ ಅಥವಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರು ನೇರ ನೇಮಕಾತಿ ಮೂಲಕ ಅಥವಾ ಕೆಲವೊಮ್ಮೆ ಬಡ್ತಿ ಮೂಲಕವು ಆಯ್ಕೆಯಾಗುತ್ತಾರೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮುಖ್ಯಸ್ಥರನ್ನು ಡಿಜಿಪಿ (DIRECTOR GENERAL OF POLICE) ಎನ್ನುತ್ತಾರೆ. ಎಲ್ಲಾ ಡಿಜಿಪಿಗಳು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಗಳಾಗಿರುತ್ತಾರೆ.
12. ಹಂಪಿ ಸ್ಮಾರಕಗಳು ಯಾವ ಜಿಲ್ಲೆಯಲ್ಲಿವೆ ?
- ಬಳ್ಳಾರಿ
- ಹಾಸನ
- ಮೈಸೂರು
- ಉಡುಪಿ
- ವಿಜಯನಗರ ಜಿಲ್ಲೆಯ ಹಂಪಿಯಲ್ಲಿರುವ ಸ್ಮಾರಕಗಳು ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪ ಕೊಡುಗೆಗಳು. ವಿಜಯನಗರ ಜಿಲ್ಲೆಯು ಬಳ್ಳಾರಿ ಜಿಲ್ಲೆಯಿಂದ ಪ್ರತ್ಯೇಕವಾಗಿ ಕರ್ನಾಟಕ ರಾಜ್ಯದ 31ನೇ ಜಿಲ್ಲೆಯಾಗಿ ರೂಪುಗೊಂಡಿದೆ. ವಿಜಯನಗರ ಜಿಲ್ಲೆಯ ಜಿಲ್ಲಾ ಕೇಂದ್ರ ಹೊಸಪೇಟೆ, ಹಂಪಿಯು ತುಂಗಭದ್ರಾ ನದಿಯ ದಡದಲ್ಲಿದೆ. ಇದನ್ನು ಪ್ರಾಚೀನ ಕಾಲದಲ್ಲಿ ಕಿಷ್ಕಂದೆ ಎಂದು ಕರೆಯುತ್ತಿದ್ದರು. ಇಲ್ಲಿ ಪ್ರತಿ ವರ್ಷ ಹಂಪಿ ಉತ್ಸವ ಅ ಅಥವಾ ವಿಜಯ ಉತ್ಸವ ಜರುಗುತ್ತದೆ.
12.1983ರಲ್ಲಿ "ಕೇಂದ್ರ - ರಾಜ್ಯ ಸಂಬಂಧ'ಕ್ಕೆ ಕೇಂದ್ರ ಸರ್ಕಾರವು ಈ ಕೆಳಗಿನ ಯಾವ ಆಯೋಗವನ್ನು ರಚಿಸಿತು ?
- ಸರ್ಕಾರಿಯಾ ಆಯೋಗ
- ದತ್ತ ಆಯೋಗ
- ಸೆತ್ವಲದ್ ಆಯೋಗ
- ರಾಜಮನ್ನಾರ್ ಆಯೋಗ
- ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಪ್ರಮುಖ ಆಯೋಗಗಳಲ್ಲಿ ಸರ್ಕಾರಿಯಾ ಆಯೋಗ ರಾಗಿದೆ. ಇದನ್ನು 1983ರಲ್ಲಿ ನೇಮಕ ಮಾಡಿದ್ದು, ನ್ಯಾಯಮೂರ್ತಿ ರಂಜಿತ್ ಸಿಂಗ್ ಸರ್ಕಾರಿಯಾ ಅವರು ಅಧ್ಯಕ್ಷರಾಗಿದ್ದು, ಒಂದಾಗಿದೆ ಬಿ.ಶಿವರಾಮನ್, ಎಸ್.ಆರ್.ಸೇನ್ ಮತ್ತು ರಾಮ ಸುಬ್ರಹ್ಮಣ್ಯಂ ಅವರು ಈ ಆಯೋಗದ ಸದಸ್ಯರಾಗಿದ್ದರು. ಈ ಆಯೋಗವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಆಡಳಿತಾತ್ಮಕ ಸಂಬಂಧದ ಸುಧಾರಣೆಗೆ ಸಂಬಂಧಿಸಿದೆ.
13.ಎಲ್ಲೋರಾದಲ್ಲಿರುವ ಪ್ರಸಿದ್ಧ ಶಿವ ದೇವಾಲಯವನ್ನು ಯಾರು ಕಟ್ಟಿಸಿದರು ?
- ಗುಪ್ತರಾಜ ಸಮುದ್ರಗುಪ್ತ
- ಚಾಲುಕ್ಯ ರಾಜ ಪುಲಿಕೇಶೀ
- ರಾಷ್ಟ್ರಕೂಟ ದೊರೆ ಕೃಷ್ಣ – 1
- ಮೌರ್ಯ ಚಕ್ರವರ್ತಿ ಅಶೋಕ
ಮಹಾರಾಷ್ಟ್ರದ ಎಲ್ಲೋರಾದಲ್ಲಿರುವ ಕೈಲಾಸನಾಥ ಗುಹಾಂತರ ದೇವಾಲಯವನ್ನು ರಾಷ್ಟ್ರಕೂಟ ದೊರೆ 1ನೇ ಕೃಷ್ಣನ ನಿರ್ಮಿಸಿದನು. ಈ ದೇವಾಲಯವು ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿದೆ. ಈ ದೇವಾಲಯದ ಚಿತ್ರವನ್ನು ಭಾರತದಲ್ಲಿ ಹೊಸದಾಗಿ ಚಲಾವಣೆ ತಂದ 20 ರೂ ನೋಟನ ಮೇಲೆ ಮುದ್ರಿಸಲಾಗಿದೆ. ಗುಪ್ತರ ಅರಸ ಸಮುದ್ರಗುಪ್ತನನ್ನು ವಿ.ಎ.ಸ್ಮಿತ್ ಅವರು ಭಾರತದ ನೆಪೋಲಿಯನ್ ಎಂದು ಕರೆದಿದ್ದಾರೆ.
14. "ರಾಜತರಂಗಿಣಿಯ" ಲೇಖಕರು ಯಾರು ?
- ಕಲ್ಲಣ
- ಅಭಿನವಗುಪ್ತ
- ಬಾಣಭಟ್ಟ
- ಕಾಳಿದಾಸ
- ರಾಜತರಂಗಿಣಿ ಎಂಬ ಕೃತಿಯು ಕ್ರಿ.ಶ. 12ನೇ ಶತಮಾನದಲ್ಲಿ ಕಲ್ಲಣನಿಂದ ಬರೆಯಲ್ಪಟ್ಟ ವಿವರಣೆ ಸಂಸ್ಕೃತ ಕೃತಿಯಾಗಿದೆ. ಇದು ಕಾಶ್ಮೀರ ಅರಸರ ರಾಜಕೀಯ, ಸಾಮಾಜಿಕ, ಆರ್ಥಿಕ ಜೀವನದ ಬಗ್ಗೆ ತಿಳಿಸುತ್ತದೆ. ಕಾಳಿದಾಸನು ಅಭಿಜ್ಞಾನ ಶಾಕುಂತಲ (ಸಂಸ್ಕೃತ) ಹೆಸರಿನ ನಾಟಕ ರಚಿಸಿದ್ದಾರೆ.
15. KSRPಯ ವಿಸ್ತ್ರತ ರೂಪ?
- ಕರ್ನಾಟಕ ಸ್ಟೇಟಿಕ್ ರಿಸರ್ವ್ ಪೊಲೀಸ್
- ಕರ್ನಾಟಕ ಸ್ಟೇಟ್ ರಿಕ್ರೂಟ್ ಮೆಂಟ್ ಪೊಲೀಸ್
- ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್
- ಕರ್ನಾಟಕ ಸೇಫ್ ರೋಡ್ ಪೊಲೀಸ್
- ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ ಎಂಬುದು ಕೆಎಸ್ಆರ್ಪಿಯ ವಿಸ್ತ್ರತ ರೂಪವಾಗಿದೆ. ಈ ಪಡೆಯ ಅಧ್ಯಕ್ಷರಾಗಿ ಹೆಚ್ಚುವರಿ ಪೊಲೀಸ್ ಡೈರೆಕ್ಟರ್ ಜನರಲ್ ರಾಂಕ್ ಅಧಿಕಾರಿ ಇರುತ್ತಾರೆ. ಇದು 10 ಬೆಟಾಲಿಯನ್ಗಳನ್ನು ಹೊಂದಿದ್ದು, ಬೆಂಗಳೂರು (4), ಮೈಸೂರು, ಬೆಳಗಾವಿ, ಕಲ್ಬುರ್ಗಿ, ಮಂಗಳೂರು, ಶಿವಮೊಗ್ಗ ಮತ್ತು ಶಿಗ್ಗಾಂವ್ನಲ್ಲಿ ತಲಾ ಒಂದು ಬೆಟಾಲಿಯನ್ ಇದೆ. ಕೆಎಸ್ಆರ್ಪಿ ತರಬೇತಿ ಶಾಲೆಯು ಕೊಪ್ಪಳ ಜಿಲ್ಲೆಯ ಮುನಿರಾಬಾದ್ನಲ್ಲಿದೆ. ಸಶಸ್ತ್ರ ಪೊಲೀಸ್ ತರಬೇತಿ ಶಾಲೆಯು ಬೆಂಗಳೂರಿನಲ್ಲಿದೆ. ಕರ್ನಾಟಕ ಪೊಲೀಸ್ ಅಕಾಡೆಮಿ – ಮೈಸೂರು,