ಸಂವಿಧಾನ ಎರವಲು ವಿಷಯಗಳು: ಮೂಲಭೂತ ಹಕ್ಕು ಮತ್ತು ನ್ಯಾಯಾಂಗ ವಿಮರ್ಶೆ, ರಾಷ್ಟ್ರಪತಿಗಳ ಮಹಾಭಿಯೋಗ, ಉಪರಾಷ್ಟ್ರಪತಿ ಹುದ್ದೆ, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಾಧೀಶ ಹುದ್ದೆಯಿಂದ ತೆಗೆದು ಹಾಕುವುದು. (ಅಮೆರಿಕ). ಮೂಲಭೂತ ಕರ್ತವ್ಯ (ರಷ್ಯಾ), ಸಂಯುಕ್ತ ಪದ್ಧತಿ (ಭಾರತ ಸರ್ಕಾರ ಕಾಯ್ದೆ 1935), ರಾಜ್ಯನಿರ್ದೇಶಕ ತತ್ವಗಳು (ಐರಿಷ್ ಸಂವಿಧಾನ), ಸಂವಿಧಾನ ತಿದ್ದುಪಡಿ (ದಕ್ಷಿಣ ಆಫ್ರಿಕಾ), ಪ್ರಸ್ತಾವನೆಯಲ್ಲಿ ನ್ಯಾಯ ಎಂಬ ಪದ (1917ರ ರಷ್ಯಾ ಕ್ರಾಂತಿ), ತುರ್ತು ಪರಿಸ್ಥಿತಿಯಲ್ಲಿ ಮೂಲಭೂತ ಹಕ್ಕುಗಳ ವಜಾ (ಜರ್ಮನಿಯ ವೈಮರ್ ಸಂವಿಧಾನ), ಸಮವರ್ತಿಪಟ್ಟಿ, ಸಂಸತ್ತಿನ ಜಂಟಿ ಅಧಿವೇಶನ (ಆಸ್ಟ್ರೇಲಿಯಾ), ಏಕಪೌರತ್ನ, ಸಂಸದೀಯ ಪದ್ಧತಿ ರಿಟ್ ಗಳು, ದ್ವಿಸದನ (ಬ್ರಿಟನ್).
* ಭಾರತೀಯ ಸಂವಿಧಾನದ ಪೀಠಿಕೆ(preamble of indian constitution)
- ನೀಡಿದವರು – ಜವಾಹರ್ ಲಾಲ್ ನೆಹರು (1946 ಡಿಸೆಂಬರ್ 13).
- ಎರವಲು -ಅಮೆರಿಕಾ
- ಸಂವಿಧಾನ ಆಂಗೀಕಾರ – 1949 ಅಕ್ಟೋಬರ್ 17
- ಅಳವಡಿಕೆ– 1949 ನವೆಂಬರ್ 26.
- ಪ್ರಮುಖ ಪದಗಳು – ಭಾರತದ ಪ್ರಜೆಗಳಾದ ನಾವು, ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತಾತ್ಮಕ, ಗಣತಂತ್ರ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಐಕ್ಯತೆ, ಸಮಗ್ರತೆ ಮತ್ತು ಭ್ರಾತೃತ್ವ ಭಾವನೆ.
- ವಿಶೇಷತೆ – 1976ರಲ್ಲಿ 42ನೇ ತಿದ್ದುಪಡಿಯ ಮೂಲಕ ಸೇರ್ಪಡೆಗೊಂಡ ಪದಗಳು ಸಮಾಜವಾದಿ, ಜಾತ್ಯತೀತ & ಐಕ್ಯತೆ.
- ಸಂವಿಧಾನದ ಪ್ರಸ್ತಾವನೆಯ ಮಹತ್ವ : (ಕೆ.ಎಂ.ಮುನ್ನಿ ಸಂವಿಧಾನದ ಜಾತಕ), (ಠಾಕೂರ್ ಭಾರ್ಗವ್ ದಾಸ್ ಸಂವಿಧಾನದ ಒಡವೆ), (ಸರ್.ಅರ್ನೆಸ್ಟ್ ಬಾರ್ಕ್‌ರ್ ಭಾರತದ ಸಂವಿಧಾನದ ಪ್ರಮುಖ ಹೊತ್ತಿಗೆ), (ಎಂ.ಹಿದಾಯತ್‌ುಲ್ಲಾ ಸಂವಿಧಾನದ ಆತ್ಮ), (ಪಾಲ್ಟಿವಾಲ್-ಸಂವಿಧಾನದ ಗುರುತಿನ ಪತ್ರ). ಗಣತಂತ್ರ-ಚುನಾಯಿತ ರಾಷ್ಟ್ರಾಧ್ಯಕ್ಷ, ಜಾತ್ಯತೀತ, ಧರ್ಮ ನಿರಪೇಕ್ಷ/ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವುದು.
* ಸಂವಿಧಾನದ ಅನುಸೂಚಿಗಳು(Schedules of the Constitution)
- ಭೂಪ್ರದೇಶ
- ಸಂಬಳ ಮತ್ತು ಸವಲತ್ತು
- ಪ್ರಮಾಣ ವಚನ
- ವಿವಿಧ ರಾಜ್ಯಗಳಿಂದ ರಾಜ್ಯಸಭೆಗೆ ಸ್ಥಾನಗಳು
- ಅನುಸೂಚಿತ ಪ್ರದೇಶ & ಬುಡಕಟ್ಟು ಪ್ರದೇಶ
- ಈಶಾನ್ಯ ಪ್ರದೇಶಕ್ಕೆ ಸಂಬಂಧ (ಈಶಾನ್ಯದ 4 ರಾಜ್ಯಗಳಾದ ಅಸ್ಸಾಂ, ಮೇಘಾಲಯ, ತ್ರಿಪುರ & ಮಿಜೋರಾಂ ರಾಜ್ಯಗಳ ಬುಡಕಟ್ಟು ಪ್ರದೇಶ)
- ಕೇಂದ್ರ, ರಾಜ್ಯ ಮತ್ತು ಸಮವರ್ತಿ ಪಟ್ಟಿ
- 22 ಅಧಿಕೃತ ಭಾಷೆಗಳು
- ಭೂ ಸುಧಾರಣೆ
- ಪಕ್ಷಾಂತರ ನಿಷೇಧ
- ಪಂಚಾಯಿತಿ
- ಮುನ್ಸಿಪಾಲಿಟಿ (ನಗರ ಸ್ಥಳೀಯ ಸಂಸ್ಥೆಗಳು)
*ಸಂವಿಧಾನ ರಚನಾ ಸಭೆಗೆ ಸಂಬಂಧಿಸಿದ ಪ್ರಮುಖರು (Important people related to Constituent Assembly):
ಸಂವಿಧಾನ ರಚನಾ ಸಭೆಯನ್ನು ವಯಸ್ಕ ಮತದಾನ ಮೂಲಕ ಆಯ್ಕೆ ಮಾಡಬೇಕೆಂದು ಒತ್ತಾಯಿಸಿದವರು – ಜೆ. ನೆಹರು ಭಾರತ ಸಂವಿಧಾನ ರಚನಾ ಸಭೆಗೆ ಮೊದಲು ಒತ್ತಾಯಿಸಿದವರು- ಎಂ.ಎನ್. ರಾಯ್
- ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ ಕನ್ನಡಿಗರು ಎಸ್.ನಿಜಲಿಂಗಪ್ಪ, ಆರ್.ದಿವಾಕರ್, ಟಿ.ಚನ್ನಯ್ಯ,ಕೆ.ಹನುಮಂತಯ್ಯ, ಕೆ.ಸಿ.ರೆಡ್ಡಿ, ಟಿ.ಸಿದ್ದಲಿಂಗಯ್ಯ, ಹೆಚ್.ಸಿದ್ದವೀರಪ್ಪ, ಎಸ್.ವಿ ಕೃಷ್ಣಮೂರ್ತಿ ರಾವ್.
- ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ ಏಕೈಕ ಮುಸ್ಲಿಂ ಮಹಿಳೆ ರಸುಲ್ಲಾ ಬೇಗಂ.
- ಸಂವಿಧಾನ ರಚನಾ ಸಭೆಯಲ್ಲಿ ಕಮ್ಯುನಿಷ್ಟ ಸಮುದಾಯ ಪ್ರತಿನಿಧಿಸಿದವರು – ಸೋಮನಾಥ್ ಲಹರಿ.
- ಆಂಗ್ಲೋ ಇಂಡಿಯನ್ಸ್ ಪ್ರತಿನಿಧಿಸಿದವರು – ಫ್ರಾಂಕ್ ಆಂತೋನಿ,
- ಸಂವಿಧಾನ ರಚನಾ ಸಭೆಯ ಮೊದಲ ಹಂಗಾಮಿ ಅಧ್ಯಕ್ಷರು – ಡಾ॥ ಸಚ್ಚಿದಾನಂದ ಸಿನ್ಹಾ 1946ರ ಡಿಸೆಂಬರ್ 9)
- ರಚನಾ ಸಭೆಯ ಅಧ್ಯಕ್ಷರು – ಡಾ| ಬಾಬು ರಾಜೇಂದ್ರ ಪ್ರಸಾದ್, ರಚನಾಸಭೆಯ ಉಪಾಧ್ಯಕ್ಷರು- ಡಾ।। ಹೆಚ್.ಸಿ. ಮುಖರ್ಜಿ, ವಿ.ಟಿ. ಕೃಷ್ಣಮಾಚಾರಿ. ಸಂವಿಧಾನ ರಚನಾ ಸಭೆಯ ಸಲಹೆಗಾರರು- ಬಿ.ಎನ್. ರಾಯ್.
- ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಅಧ್ಯಕ್ಷರು – ಡಾ।। ಬಿ.ಆರ್. ಅಂಬೇಡ್ಕರ್ (ಸಂವಿಧಾನದ ಶಿಲ್ಪಿ).
- ಸಂವಿಧಾನ ರಚನಾ ಸಭೆಯ ಮೊದಲ ಸಭೆ- 1946 ಡಿಸೆಂಬರ್ 9.
- ರಚನಾ ಸಭೆಯ ಕೊನೆಯ ಸಭೆ 19490 ನವೆಂಬರ್ 14-26. ಸಂವಿಧಾನ ರಚನೆಗೆ ತೆಗೆದುಕೊಂಡ ಒಟ್ಟು ಅವಧಿ- 2 ವರ್ಷ 11 ತಿಂಗಳು 18 ದಿನಗಳು.
- ಸಂವಿಧಾನ ಅಂಗೀಕಾರವಾದ ದಿನಾಂಕ – 1949ರ ನವೆಂಬರ್ 26 (ಸಂವಿಧಾನ ದಿವಸ್) ಹಾಗೂ ಸಂವಿಧಾನ ಚಾರಿ
- 1950ರ ಜನವರಿ 26 (ಗಣರಾಜ್ಯ ದಿನ), ಮೂಲ ಸಂವಿಧಾನದಲ್ಲಿದ್ದ ಭಾಗಗಳು- 22 ಭಾಗಗಳು, 395 ವಿಧಿಗಳು & 8 ಅನುಸೂಚಿಗಳು
- ಪ್ರಸ್ತುತ ಸಂವಿಧಾನದಲ್ಲಿರುವ ಭಾಗಗಳು 25 ಭಾಗಗಳು, 470 ವಿಧಿಗಳು ಮತ್ತು 12 ಅನುಸೂಚಿಗಳು.
*ಭಾರತ ಸಂವಿಧಾನದ ಮೂಲಭೂತ ಹಕ್ಕುಗಳು(fundamental rights of indian constitution)
ಸಂವಿಧಾನದ ಭಾಗ 3ರ 12 ರಿಂದ 35ನೇ ವಿಧಿಗಳು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದೆ. (ಭಾರತದ ಮ್ಯಾಗ್ನಕಾರ್ಟ್) (ಅಮೆರಿಕಾ ಸಂವಿಧಾನದಿಂದ ಎರವಲು)
*ಸಮಾನತೆಯ ಹಕ್ಕು (ಸಂವಿಧಾನದ 14-18 ವಿಧಿಗಳು )
- 14ನೇ ವಿಧಿ : ಕಾನೂನಿನ ಮುಂದೆ ಎಲ್ಲರೂ ಸಮಾನರು.
- 15ನೇವಿಧಿ : ಲಿಂಗ, ಜಾತಿ, ಜನಾಂಗ, ಧರ್ಮದ ಆಧರಿಸಿ ತಾರತಮ್ಯ ಮಾಡುವಂತಿಲ್ಲ.
- 16ನೇ ವಿಧಿ : ಸಾರ್ವಜನಿಕ ಹುದ್ದೆ ಪಡೆಯಲು ಎಲ್ಲರೂ ಸಮಾನರು.
- 17ನೇ ವಿಧಿ : ಅಸ್ಪೃಶ್ಯತಾ ಆಚರಣೆ ನಿಷೇಧ (ಅಸ್ಪೃಶ್ಯತಾ ಆಚರಣೆ ನಿಷೇಧ ಕಾಯ್ದೆ-1955).
- 18ನೇ ವಿಧಿ : ಬಿರುದು ಬಾವಳಿಗಳ ಸ್ವೀಕಾರ ನಿಷೇಧ.
*ಸ್ವಾತಂತ್ರ್ಯದ ಹಕ್ಕು (ಸಂವಿಧಾನದ 19-22ನೇ ವಿಧಿಗಳು)
19ನೇ ವಿಧಿ – 6 ವಿಧದ ಸ್ವಾತಂತ್ರ್ಯವನ್ನು ಒದಗಿಸುತ್ತದೆ.
- ವಾಕ್ ಸ್ವಾತಂತ್ರ್ಯ
- ಸಭೆ ಸೇರುವ ಸ್ವಾತಂತ್ರ್ಯ
- ಸಂಘ ಕಟ್ಟುವ ಸ್ವಾತಂತ್ರ್ಯ
- ಸಂಚಾರ ಮಾಡುವ ಸ್ವಾತಂತ್ರ್ಯ
- ವಾಸಿಸುವ ಸ್ವಾತಂತ್ರ್ಯ
- ಆಸ್ತಿ ಹೊಂದುವ ಸ್ವಾತಂತ್ರ್ಯ (ತೆಗೆದು ಹಾಕಲಾಗಿದೆ)
- ವೃತ್ತಿ ಮಾಡುವ ಸ್ವಾತಂತ್ರ್ಯ
- 20ನೇ ವಿಧಿ : ಅಪರಾಧಿಗಳಿಗೆ ಸ್ವಾತಂತ್ರ್ಯವನ್ನು ನೀಡಿಕೆ
- 21ನೇ ವಿಧಿ : ಜೀವಿಸುವ ಹಕ್ಕು + 21ಎ ನೇ ವಿಧಿ : ಶಿಕ್ಷಣದ ಹಕ್ಕು (6 ರಿಂದ 14 ವರ್ಷದ ಮಕ್ಕಳಿಗೆ ಉಚಿತ & ಕಡ್ಡಾಯ ಶಿಕ್ಷಣ ಒದಗಿಸುವುದು) (86ನೇ ತಿದ್ದುಪಡಿ 2002ರಲ್ಲಿ 21ಎ ವಿಧಿ ಸೇರ್ಪಡೆ)
- 22ನೇ ವಿಧಿ : ಬಂಧನಕ್ಕೆ ಸಂಬಂಧಿಸಿದಂತೆ ಹಕ್ಕುಗಳು
*ಶೋಷಣೆವಿರುದ್ದದ ಹಕ್ಕು (23-24 ವಿಧಿಗಳು)
- 23ನೇ ವಿಧಿ : ಜೀತಪದ್ಧತಿ & ಬಲಾತ್ಕಾರದ ದುಡಿಮೆ ನಿಷೇಧ-1976 ಜೀತಪದ್ಧತಿ ರದ್ದತಿ
- 24ನೇ ವಿಧಿ : ಬಾಲಕಾರ್ಮಿಕ ನಿಷೇಧ (14 ವರ್ಷದ ಒಳಗಿನ ಮಕ್ಕಳಿಗೆ ಅನ್ವಯ)-1986 ಬಾಲಕಾರ್ಮಿಕ ವಿರೋಧಿ ಕಾನೂನು ಜಾರಿ (ಜೂನ್ 12 ಬಾಲಕಾರ್ಮಿಕ ವಿರೋಧಿ ದಿನ).
*ಧಾರ್ಮಿಕ ಸ್ವಾತಂತ್ರ್ಯದ ಹಕ್ಕು (25-28 ವಿಧಿಗಳು)
- 25ನೇ ವಿಧಿ : ಧರ್ಮವನ್ನು ಸ್ವೀಕರಿಸುವ & ಪ್ರಚಾರ ಮಾಡುವ ಸ್ವಾತಂತ್ರ್ಯ
- 26ನೇ ವಿಧಿ : ಧಾರ್ಮಿಕ ಸಂಸ್ಥೆ ಸ್ಥಾಪನೆ.
- 27ನೇ ವಿಧಿ : ಧಾರ್ಮಿಕ ಅಭಿವೃದ್ಧಿಗಾಗಿ ತೆರಿಗೆ ಸಂಗ್ರಹಣೆ.
- 28ನೇ ವಿಧಿ : ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಶಿಕ್ಷಣ.
*ಸಾಂಸ್ಕೃತಿಕ & ಶೈಕ್ಷಣಿಕ ಹಕ್ಕು (29-30ನೇ ವಿಧಿಗಳು)
- 29ನೇ ವಿಧಿ : ಅಲ್ಪಸಂಖ್ಯಾತರ ಹಿತಾಸಕ್ತಿಗಳ ಸಂರಕ್ಷಣೆ.
- 30ನೇ ವಿಧಿ : ಅಲ್ಪಸಂಖ್ಯಾತರಿಗೆ ಶೈಕ್ಷಣಿಕ ಸಂಸ್ಥೆ ಸ್ಥಾಪನೆ.
1978ರಲ್ಲಿ ಸಂವಿಧಾನದ 44ನೇ ತಿದ್ದುಪಡಿ ಅನ್ವಯ 31ನೇ ವಿಧಿಯಲ್ಲಿದ್ದ ಆಸ್ತಿ ಹಕ್ಕನ್ನು ಮೂಲಭೂತ ಹಕ್ಕಿನಿಂದ ತೆಗೆದುಹಾಕಿ 300 ಎ ವಿಧಿಯ ಅನ್ವಯ ಕಾನೂನಿನ ಹಕ್ಕನಾಗಿಸಿದೆ.
*ಸಂವಿಧಾನ ಪರಿಹಾರ ಹಕ್ಕು (ಸಂವಿಧಾನದ 32 ನೇ ವಿಧಿ)
- 32ನೇ ವಿಧಿಯ ಈ ಹಕ್ಕನ್ನು ಡಾ|ಬಿ.ಆರ್. ಅಂಬೇಡ್ಕರ್‌ವರು “ಸಂವಿಧಾನದ ಆತ್ಮ & ಹೃದಯ” ಎಂದಿದ್ದಾರೆ.
- ಹೇಬಿಯಸ್ ಕಾರ್ಪಸ್ (ಬಂಧಿ ಪ್ರತ್ಯಕ್ಷೀಕರಣ) – ಯಾವುದಾದರೂ ವ್ಯಕ್ತಿಯನ್ನು ಪೊಲೀಸರು ಅಥವಾ ಬೇರೆ ಯಾರಾದರೂ ವ್ಯಕ್ತಿ ಬಂಧನದಲ್ಲಿಟ್ಟಾಗ 24 ಗಂಟೆಯೊಳಗೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಆದೇಶ (To have a Body).
- ಮ್ಯಾಂಡಮಸ್ (ಪರಮಾದೇಶ): ಸರ್ಕಾರಿ ಅಧಿಕಾರಿಗೆ ತನ್ನ ಕಾರ್ಯ ಮಾಡಲು ನ್ಯಾಯಾಲಯದ ಆದೇಶ (We Command or We order) ಸರ್ಷಿಯೋರರಿ: ಆಧೀನ ನ್ಯಾಯಾಲಯದ ಆದೇಶ ರದ್ದುಗೊಳಿಸಲು & ಬಾಕಿ ಮೊಕದ್ದಮೆಗಳನ್ನು ಕೆಳ ನ್ಯಾಯಾಲಯಗಳಿಗೆ (To be Certified or To be informed).
- ಕೊ ವಾರೆಂಟ್: ಅಕ್ರಮವಾಗಿ ಸಾರ್ವಜನಿಕ ಹುದ್ದೆಯನ್ನು ಅಥವಾ ಸರ್ಕಾರದ ಉನ್ನತ ಸ್ಥಾನವನ್ನು ಅಕ್ರಮವಾಗಿ ಪಡೆದಿದ್ದರೆ ಆಗ (By What Authority or Warrant).
- ಪ್ರೊಹಿಬಿಷನ್: ಅಧೀನ ನ್ಯಾಯಾಲಯವು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಅಥವಾ ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿ ತೀರ್ಪು ನೀಡದಂತೆ.(To forbid).
Pingback: ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳುವುದು?(police constable syllabus)