ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯ ಮಾಹಿತಿ,ಸಾಮಾನ್ಯ ಅಧ್ಯಯನಮಾಹಿತಿ ಮತ್ತು ಇಲಾಖೆಗೆ ಸಂಭಂದಪಟ್ಟ ಮಾಹಿತಿಗಳು
1) ಸಾಮಾನ್ಯ ಜ್ಞಾನ (General Knowledge): ಸಾಮಾನ್ಯ ಜ್ಞಾನದಲ್ಲಿ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ಆರ್ಥಿಕ, ಕ್ರೀಡಾ ಕ್ಷೇತ್ರ ಬೆಳವಣಿಗೆಗಳು, ರಾಜ್ಯ, ರಾಷ್ಟ್ರೀಯ & ಅಂತರಾಷ್ಟ್ರೀಯ ವಿದ್ಯಮಾನಗಳನ್ನು ಒಳಗೊಂಡಿದೆ.
2) ಸಾಮಾನ್ಯ ವಿಜ್ಞಾನ (General Science): ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಇಸ್ರೋ, ಡಿಆರ್‌ಡಿಒ, ತಂತ್ರಜ್ಞಾನ ಹಾಗೂ ನಿತ್ಯಜೀವನ & ಅನ್ವಯಿಕ ವಿಜ್ಞಾನವನ್ನು ಒಳಗೊಂಡಿರುತ್ತದೆ.
3) ಭೂಗೋಳಶಾಸ್ತ್ರ (Geography): ಭಾರತದ ಭೂಗೋಳಶಾಸ್ತ್ರ, ಕರ್ನಾಟಕ ಭೂಗೋಳಶಾಸ್ತ್ರ ಹಾಗೂ ಪ್ರಾಕೃತಿಕ ಭೂಗೋಳಶಾಸ್ತ್ರವನ್ನು ಒಳಗೊಂಡಿದೆ.
4) ಇತಿಹಾಸ: ಪ್ರಾಚೀನ, ಮಧ್ಯಕಾಲೀನ, ಆಧುನಿಕ ಭಾರತದ ಇತಿಹಾಸ, ಜಾಗತಿಕ ಹಾಗೂ ಕರ್ನಾಟಕದ ಇತಿಹಾಸ,
5) ಭಾರತದ ಸಂವಿಧಾನ (Constitution of India): ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಮೂಲಭೂತ ಹಕ್ಕುಗಳು.
ರಾಜ್ಯ ನಿರ್ದೇಶಕ ತತ್ವಗಳು, ಮೂಲಭೂತ ಕರ್ತವ್ಯಗಳು, ಸಾಂವಿಧಾನಿಕ ಸಂಸ್ಥೆಗಳು, ಶಾಸನಬದ್ಧ ಸಂಸ್ಥೆಗಳು ಹಾಗೂ ಇತರೆ ಸಂಬಂಧಿತ ಮಾಹಿತಿಗಳನ್ನು ಒಳಗೊಂಡಿದೆ.
6) ಭಾರತದ ಸ್ವಾತಂತ್ರ್ಯ ಸಂಗ್ರಾಮ ಭಾರತದ ರಾಷ್ಟ್ರೀಯ ಚಳುವಳಿಯ ಹೋರಾಟದ ಹಂತಗಳು, 1857ರ ಸಿಪಾಯಿ ದಂಗೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಮಂದಗಾಮಿಗಳು, ತೀವ್ರಗಾಮಿ ನಾಯಕರು, ಗಾಂಧಿಯುಗ ಹಾಗೂ ಸ್ವಾತಂತ್ರ್ಯ ನಂತರದ ರಾಜಕೀಯ ಬೆಳವಣಿಗೆ.