ಇದೊಂದು ಪ್ರಮುಖ ಪೋಸ್ಟ್ ಆಗಿದ್ದು, ನಮ್ಮ “website” ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಬಯಸುವವರಿಗೆ ಮಾರ್ಗದರ್ಶಿಯಾಗುತ್ತದೆ. ಇಲ್ಲಿ ನೀವು ಪರೀಕ್ಷೆಯ ಪಠ್ಯಕ್ರಮ, ಅಂಕಗಳ ಹಂಚಿಕೆ, ಮತ್ತು ಹೀಗಾಗಿ ಪರೀಕ್ಷೆಗೆ ತಯಾರಿ ಮಾಡಲು ಬಳಸಬಹುದಾದ ಪ್ರಮುಖ ತಂತ್ರಗಳು ಕುರಿತು ಸಂಪೂರ್ಣ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ. “ಪೊಲೀಸ್ ಕಾನ್ಸ್‌ಟೇಬಲ್ ಪಠ್ಯಕ್ರಮ (police constable syllabus) ಕನ್ನಡ – ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳುವುದು?” ಎಂಬ ಶೀರ್ಷಿಕೆಯ ಅಡಿಯಲ್ಲಿ, ನೀವು ಈ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಅಗತ್ಯವಾದ ಎಲ್ಲಾ ಮಾಹಿತಿಯನ್ನು ನೀಡಲಾಗುತ್ತದೆ.
1. ಯಾವ ಸಮುದ್ರವು ಅತಿ ಹೆಚ್ಚು ಲವಣಾಂಶಕ್ಕೆ ಹೆಸರುವಾಸಿಯಾಗಿದೆ ?
- ಡೆಡ್ ಸಮುದ್ರ
- ರೆಡ್ ಸಮುದ್ರ
- ಸರಗಪ್ಪೋ ಸಮುದ್ರ
- ಕ್ಯಾಸ್ಪಿಯನ್ ಸಮುದ್ರ
- ಸಾಗರಗಳು ಸರಾಸರಿ ಶೇ.3.5ರಷ್ಟು ಲವಣಾಂಶ ಹೊಂದಿರುತ್ತವೆ. ಆದರೆ ಸಂಕ್ರಾಂತಿ ಕ್ರಾಂತಿ ವೃತ್ತಗಳ ಬಳಿ ಲವಣಾಂಶ ಹೆಚ್ಚಾಗಿರುತ್ತದೆ. ಟಿರ್ಕಿಯ ವ್ಯಾನ್ ಸರೋವರ, ಶೇ.33ರಷ್ಟು, ಜೋರ್ಡಾನ್ ದೇಶದ ಮೃತ್ಯು ಸಮುದ್ರ (ಡೆಡ್ ಸೀ) ಶೇ.30ರಷ್ಟು ಮತ್ತು ಭಾರತದ ಸಾಂಬಾರ್ ಸರೋವರ ಶೇ.26.5ರಷ್ಟು ಲವಣಾಂಶ ಹೊಂದಿದೆ. ಡೆಡ್ ಸೀಯು ಜೋರ್ಡಾನ್, ಇಸ್ರೇಲ್ ಮತ್ತು ವೆಸ್ಟ್ ಬ್ಯಾಂಕ್‌ನ ಎಲ್ಲೆಯನ್ನು ಹೊಂದಿದೆ. ಅತ್ಯಂತ ದೊಡ್ಡ ಸಾಗರ (ಫೆಸಿಫಿಕ್). ಅತ್ಯಂತ ಆಳವಾದ ತಗ್ಗು (ಮೆರಿನಾ ಟ್ರಂಚ್).
2. ಇಸ್ರೋ ಮಾಸ್ಟರ್ ನಿಯಂತ್ರಣ ಸೌಲಭ್ಯ (ISRO Master Control Facility) ಎಲ್ಲಿದೆ ?
- ಶಿವಮೊಗ್ಗ
- ಹಾಸನ
- ಬೆಂಗಳೂರು
- ಮುಂಬೈ
- ಕರ್ನಾಟಕದ ಹಾಸನ ಮತ್ತು ಮಧ್ಯಪ್ರದೇಶದ ಭೂಪಾಲ್ ನಗರಗಳಲ್ಲಿ ಇಸ್ರೋದ ಮಾಸ್ಟರ್ ನಿಯಂತ್ರಣ ಸೌಲಭ್ಯ (MSF) ಘಟಕಗಳನ್ನು ನಿರ್ಮಿಸಲಾಗಿದೆ. ಇಸ್ರೋದ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ. ಭಾರತದ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರವು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿದೆ. ಇತ್ತೀಚೆಗೆ ತಮಿಳುನಾಡಿನ ಕುಲಶೇಖರಪುರದಲ್ಲಿ ಭಾರತದ ಎರಡನೇ ಉಪಗ್ರಹ ಉಡಾವಣಾ ಕೇಂದ್ರವನ್ನು ನಿರ್ಮಿಸಲಾಗಿದೆ. ಕೇರಳ ರಾಜ್ಯದ ತಿರುವನಂತಪುರಂದಲ್ಲಿ ವಿಕ್ರಂ ಸಾರಾಬಾಯಿ ಬಾಹ್ಯಾಕಾಶ ಕೇಂದ್ರವಿದೆ. (ಇಸ್ರೋದ ಸಂಸ್ಥಾಪಕ ಅಧ್ಯಕ್ಷರು – ವಿಕ್ರಂ
3. ಮದುವೆಗೆ ಮೊದಲು ವರನ ಮನೆಯಲ್ಲಿ ಶೌಚಾಲಯವಿದೆ ಎಂದು ಖಚಿತಪಡಿಸಿದ ನಂತರ. ಯಾವ ರಾಜ್ಯದ ವಧುಗಳು ಮುಖ್ಯಮಂತ್ರಿ ಕನ್ಯಾ ವಿವಾಹ/ನಿಕಾಹ ಯೋಜನೆಯ ಅಡಿಯಲ್ಲಿ ರೂ. 51,000 ಪಡೆಯಲು ಅರ್ಹರಿದ್ದಾರೆ ?
- ಉತ್ತರಪ್ರದೇಶ
- ರಾಜಸ್ಥಾನ
- ಮಧ್ಯಪ್ರದೇಶ
- ಬಿಹಾರ
- ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರು ಮುಖ್ಯಮಂತ್ರಿ ನಿಕಾಹ ಯೋಜನೆಯನ್ನು ಆರಂಭಗೊಳಿಸಿದರು. ಈ ಯೋಜನೆಯು ಮದುವೆಗೆ ಮೊದಲು ವರನ ಮನೆಯಲ್ಲಿ ಶೌಚಾಲಯವಿದೆ ಎಂದು ಖಚಿತಪಡಿಸಿದ ನಂತರ, ವಧುಗಳು ಮುಖ್ಯಮಂತ್ರಿ ಕನ್ಯಾ ನಿಕಾಹ ಯೋಜನೆಯ ಅಡಿಯಲ್ಲಿ ರೂ. 51,000- ಪಡೆಯಲು ಅರ್ಹರಿದ್ದಾರೆ. ಇದರ ಮುಖ್ಯ ಉದ್ದೇಶ ಮಧ್ಯಪ್ರದೇಶ ರಾಜ್ಯವನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತವನ್ನಾಗಿಸುವುದು. ಕರ್ನಾಟಕ ರಾಜ್ಯ ಸರ್ಕಾರದ ಜನಸೇವಕ್ ಯೋಜನೆಯು ನಾಗರಿಕರ ಮನೆಬಾಗಿಲಿಗೆ ಸರ್ಕಾರಿ ಸೇವೆಗಳನ್ನು ಒದಗಿಸುವುದು. ಗ್ರಾಮೀಣ ಭಾಗದ ಜನರಿಗೆ ಒಂದೇ ಸೂರಿನಡಿ ಹಲವು ಸೇವೆ ಒದಗಿಸುವುದು – ಗ್ರಾಮ ಬನ್ (ದಾವಣಗೆರೆಯಲ್ಲಿ ಮೊದಲು ಜಾರಿ)
4. ಯಾವ ಪ್ರಾಣಿ ವಿಶ್ವ ವನ್ಯಜೀವಿ ನಿಧಿಯ (World Wildife Fund) ಸಂಕೇತವಾಗಿದೆ ?
- ಡಾಲ್ಟನ್
- ಕಾಂಗರೂ
- ದೈತ್ಯ ಪಾಂಡ
- ಹುಲಿ
- WWF (World Wide Fund For Nature) ಇದೊಂದು ಸರ್ಕಾರೇತರ ಸಂಸ್ಥೆಯಾಗಿದ್ದು, 1961ರ ಏಪ್ರಿಲ್ 29ರಂದು ಆರಂಭವಾಯಿತು. ಇದರ ಕೇಂದ್ರ ಕಚೇರಿ। ಸ್ವಿಡ್ಕರ್‌ಲ್ಯಾಂಡ್‌ನ ಗ್ಲಾಂಡ್ ನಗರದಲ್ಲಿದೆ. ಈ ಸಂಸ್ಥೆಯು ಲೀವಿಂಗ್ ಪ್ಲಾನೆಟ್ ವರದಿ ಪ್ರಕಟಿಸುವುದು. ಪಾಂಡಾವು ಈ ಸಂಸ್ಥೆಯ ಲೋಗೋ ಆಗಿದೆ. ಅರ್ಥ್ ಅವರ್ ಅನ್ನು ಮಾರ್ಚ್ ತಿಂಗಳ ಕೊನೆಯ ಶನಿವಾರದ ರಾತ್ರಿ 8:30 ರಿಂದ 9:30ರವರೆಗೆ ವಿದ್ಯುತ್ ದೀಪ ಆರಿಸುವ ಮೂಲಕ ಆಚರಿಸಲಾಗುತ್ತದೆ. ( 2021ರ ಮಾರ್ಚ್ 27 ರಂದು ನಡೆದ ಆರ್ಥ್ ಅವರ್ ದಿನದ ಧೈಯವಾಕ್ಯ: Climate Change to Save Earth.)
5. ನಿಯಾಸಿನ್, ಯಾವ ವಿಟಮಿನ್ ರಾಸಾಯನಿಕ ಹೆಸರು ?
- ವಿಟಮಿನ್-ಬಿ3
- ವಿಟಮಿನ್-ಬಿ1
- ವಿಟಮಿನ್-ಬಿ2
- ವಿಟಮಿನ್-ಕೆ
- ವಿಟಮಿನ್ -ಬಿತಿಯ ರಾಸಾಯನಿಕ ಹೆಸರು ನಿಯಾಸಿನ್, ವಿಟಮಿನ್ಸ್ ಗಳು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ವಿಟಮಿನ್-ಎ, ಡಿ, ಇ, ಕೆ ಗಳು ಕೊಬ್ಬಿನಾಂಶದಲ್ಲಿ ಕರಗುತ್ತವೆ. ಬಿ & ಸಿ ವಿಟಮಿನ್‌ಗಳು ನೀರಿನಲ್ಲಿ ಕರಗುತ್ತವೆ. ರಾಸಾಯನಿಕ ಹೆಸರುಗಳು:- ವಿಟಮಿನ್ ಎ (ರೆಟಿನಾಲ್), ವಿಟಮಿನ್ ಬಿ1 (ಥಯಾಮಿನ್), ವಿಟಮಿನ್ ಬಿ2(ರೈಬೋಪ್ಲೇವಿನ್), ವಿಟಮಿನ್ ಬಿ-3 (ನಿಯಾಸಿನ್), ವಿಟಮಿನ್ ಬಿ-6 (ಪಿರಿಡಾಕ್ಸಿನ್), ವಿಟಮಿನ್ ಕೆ (ಪೈಲ್ಲೋಕ್ವಿನೈನ್).
ಇದೊಂದು ಪ್ರಮುಖ ಪೋಸ್ಟ್ ಆಗಿದ್ದು, ನಮ್ಮ “website” ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಬಯಸುವವರಿಗೆ ಮಾರ್ಗದರ್ಶಿಯಾಗುತ್ತದೆ. ಇಲ್ಲಿ ನೀವು ಪರೀಕ್ಷೆಯ ಪಠ್ಯಕ್ರಮ, ಅಂಕಗಳ ಹಂಚಿಕೆ, ಮತ್ತು ಹೀಗಾಗಿ ಪರೀಕ್ಷೆಗೆ ತಯಾರಿ ಮಾಡಲು ಬಳಸಬಹುದಾದ ಪ್ರಮುಖ ತಂತ್ರಗಳು ಕುರಿತು ಸಂಪೂರ್ಣ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ. “ಪೊಲೀಸ್ ಕಾನ್ಸ್‌ಟೇಬಲ್ ಪಠ್ಯಕ್ರಮ (police constable syllabus) ಕನ್ನಡ – ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳುವುದು?” ಎಂಬ ಶೀರ್ಷಿಕೆಯ ಅಡಿಯಲ್ಲಿ, ನೀವು ಈ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಅಗತ್ಯವಾದ ಎಲ್ಲಾ ಮಾಹಿತಿಯನ್ನು ನೀಡಲಾಗುತ್ತದೆ.
6. ರಾಜ್ಯಪಾಲರು ಯಾರನ್ನು ನೇಮಕ ಮಾಡುವುದಿಲ್ಲ?
- ಹೈಕೋರ್ಟ್‌ನ ನ್ಯಾಯಾಧೀಶರು
- ಮುಖ್ಯಮಂತ್ರಿ
- ರಾಜ್ಯದ ಅಡ್ವಕೇಟ್ ಜನರಲ್
- ರಾಜ್ಯ ಸಾರ್ವಜನಿಕ ಸೇವಾ ಆಯೋಗದ ಅಧ್ಯಕ್ಷರು
- ಕೊಲಿಜಿಯಂ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿಗಳು ಸಂವಿಧಾನದ 1124ನೆ ವಿಧಿಯನ್ವಯ ಸುಪ್ರೀಂಕೋರ್ಟ್ ಮತ್ತು 217ನೇ ವಿಧಿಯನ್ವಯ ಹೈಕೋರ್ಟ್‌ನ ನ್ಯಾಯಾಧೀಶರನ್ನು ನೇಮಕ ಮಾಡುತ್ತಾರೆ. ಆದ್ದರಿಂದ ಕೊಟ್ಟಿರುವ ಆಯ್ಕೆಗಳ ಪ್ರಕಾರ ಮುಖ್ಯಮಂತ್ರಿ, ಅಡ್ವಕೇಟ್ ಜನರಲ್, ರಾಜ್ಯ ಸಾರ್ವಜನಿಕ ಸೇವಾ ಆಯೋಗದ ಅಧ್ಯಕ್ಷರು ರಾಜ್ಯಪಾಲರಿಂದ ನೇಮಕಗೊಳ್ಳುತ್ತಾರೆ. ಹೈಕೋರ್ಟಿನ ನ್ಯಾಯಾಧೀಶರನ್ನು ರಾಜ್ಯಪಾಲರು ನೇಮಕ ಮಾಡುವುದಿಲ್ಲ. ಇವರಿಗೆ ರಾಜ್ಯಪಾಲರು 219ನೇ ವಿಧಿ ಅನ್ವಯ ಪ್ರಮಾಣ ವಚನ ಬೋಧಿಸುತ್ತಾರೆ. ಭಾರತದಲ್ಲಿ 25ನೇ ಹೈಕೋರ್ಟ್ – ಆಂಧ್ರಪ್ರದೇಶದ ಹೈಕೋರ್ಟ್
7. ಅಂತರಾಷ್ಟ್ರೀಯ ಯೋಗ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
- ಮಾರ್ಚ್ 21
- ಜೂನ್ 21
- ಏಪ್ರಿಲ್ 22
- ಮೇ30
2019ರ ಅಂತರಾಷ್ಟ್ರೀಯ ಯೋಗ ದಿನವನ್ನು ಜಾರ್ಖಂಡ್‌ನ ರಾಂಚಿಯಲ್ಲಿ ಹೃದಯಕ್ಕಾಗಿ ಯೋಗ ಧೈಯವಾಕ್ಯದಲ್ಲಿ ಆಚರಿಸಲಾಗಿತ್ತು. 2020ರ ಜೂನ್ 21 ರಂದು ಯೋಗ ದಿನವನ್ನು ವರ್ಚುವಲ್ ರೂಪದಲ್ಲಿ ‘ಮನೆಯಲ್ಲಿ ಯೋಗ, ಕುಟುಂಬದವರೊಂದಿಗೆ ಯೋಗ’ಎಂಬ ಧೈಯವಾಕ್ಯದಲ್ಲಿ ಆಚರಿಸಲಾಗಿತ್ತು. ಜೂನ್ 21ರಂದು ಸೂರ್ಯನ ನೇರ ಕಿರಣಗಳು ಕರ್ಕಾಟಕ ಸಂಕ್ರಾಂತಿ ರೇಖೆಯ ಮೇಲೆ ನೇರವಾಗಿ ಬೀಳುವುದರಿಂದ ಈ ದಿನ ಉತ್ತರಗೋಳಾರ್ಧದಲ್ಲಿ ಅಧಿಕ ಹಗಲಿನ ಅವಧಿಯಿರುತ್ತದೆ. ಮಾರ್ಚ್ 21 ಮತ್ತು ಸೆಪ್ಟೆಂಬರ್ 23 ರಂದು ಹಗಲು ಮತ್ತು ರಾತ್ರಿಗಳು ಸಮನಾಗಿರುತ್ತವೆ. ಡಿಸೆಂಬರ್ 22 ರಂದು ದಕ್ಷಿಣ ಗೋಳಾರ್ಧದಲ್ಲಿ ಅಧಿಕ ಹಗಲಿನ ಅವಧಿಯಿರುತ್ತದೆ. (ಏಪ್ರಿಲ್ 22 – ವಿಶ್ವ ಭೂ ದಿನ)
8. ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ಫೈನಲ್ ಗೆ ಅರ್ಹತೆ ಪಡೆದ ಮೊದಲ ಭಾರತೀಯ ಪುರುಷ ಬಾಕ್ಸರ್ ಯಾರು?
- MD.ಅಲಿ ಕಾಮರ್
- ಗೌರವ್ ಸೋಲಂಕಿ
- ಅಮಿತ್ ಪಂಘಾಲ್
- ದಿನೇಶ್ ಕುಮಾರ
ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ಫೈನಲ್ ಗೆ ಅರ್ಹತೆ ಪಡೆದ ಮೊದಲ ಭಾರತೀಯ ಪುರುಷ ಬಾಕ್ಸರ್ ಅಮಿತ್ ಪಂಘಲ್, ಹರಿಯಾಣ ಮೂಲದ ಬಾಕ್ಸರ್ ಆಟಗಾರ. ಇವರು 2018ರ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಮೊದಲ ಬಾರಿಗೆ ಭಾಗವಹಿಸಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. 2018ರ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ. 2019ರ ಸೆಪ್ಟೆಂಬರ್‌ನಲ್ಲಿ ರಷ್ಯಾದ ಯಕಟರಿನ್‌ಬರ್ಗ್‌ನಲ್ಲಿವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ಟೂರ್ನಿ ಜರುಗಿತ್ತು . ఈ ಟೂರ್ನಿಯ ಫೈನಲ್ ನಲ್ಲಿ ಅಮಿತ್ ಫಂಗಲ್ ಅವರು ರಜತ ಪದಕ ಪಡೆದಿದ್ದಾರೆ. 2021ರ ಟೂರ್ನಿಯು ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ಜರುಗಲಿದೆ. ಕರ್ನಾಟಕದ ಆಶ್ರಿತ ವಿ. ವಲೈಟಿ ಅವರು ಐಎಎಫ್ ಫೈಟ್ ಟೆಸ್ಟ್ ಇಂಜಿನಿಯರಿಂಗ್ ಮುಗಿಸಿದ ಮೊದಲ & ಏಕೈಕ ಮಹಿಳೆ.
9. ಪ್ರಸಿದ್ಧ ಪುಸ್ತಕ "ದಾಸ್ ಕ್ಯಾಪಿಟಲ್" ಬರೆದ ಲೇಖಕ ಯಾರು ?
- ಆಡಂ ಸ್ಮಿತ್
- ಕಾರ್ಲ್ ಮಾರ್ಕ್ಸ್
- ರುಸೋ
- ವೋಲ್ಟರ್
ದಾಸ್ ಕ್ಯಾಪಿಟಲ್ ಮತ್ತು ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ಕೃತಿಗಳು ಕಾರ್ಲ್ ಮಾರ್ಕ್ಸ್ ಅವರ ಕೃತಿಗಳಾಗಿವೆ. ಕಾರ್ಲ್ ಮಾರ್ಕ್ಸ್ ಅವರನ್ನು ವೈಜ್ಞಾನಿಕ ಸಮಾಜವಾದದ ಪಿತಾಮಹ ಎನ್ನುವರು. ಆಡಂ ಸ್ಮಿತ್ ಅವರು ದಿ ವೆಲ್ತ್ ಆಫ್ ನೇಷನ್ ಎಂಬ ಪುಸ್ತಕವನ್ನು ರಚಿಸಿದ್ದಾರೆ. ಇವರನ್ನು ಅರ್ಥಶಾಸ್ತ್ರದ ಪಿತಾಮಹ ಎನ್ನುವರು. ರೂಸೊ ಅವರ ಕೃತಿ – ಸೋಶಿಯಲ್ ಕಾಂಟ್ರಾಕ್ಟ್ (ಸಾಮಾಜಿಕ ಒಪ್ಪಂದ)
10. ಬಾಹ್ಯಾಕಾಶದಲ್ಲಿರುವ ಗಗನಯಾತ್ರಿ ಆಕಾಶವನ್ನು ಹೀಗೆ ಗಮನಿಸುತ್ತಾರೆ ?
- ಬಿಳಿ
- ಕಪ್ಪು
- ನೀಲಿ
- ಕೆಂಪು
ಬಾಹ್ಯಾಕಾಶದಲ್ಲಿರುವ ಗಗನಯಾತ್ರಿ ಆಕಾಶವನ್ನು ಕಪ್ಪು ರೀತಿಯಲ್ಲಿ ಗಮನಿಸುತ್ತಾರೆ. ಗಗನಯಾತ್ರಿ ಎಂಬುವರು ಮಾನವ ಬಾಹ್ಯಾಕಾಶ ಹಾರಾಟ ಯೋಜನೆಗೆ ಗಗನ ನೌಕೆಯನ್ನು ನಿಯಂತ್ರಿಸಲು, ಚಾಲನೆ ಮಾಡಲು ಅಥವಾ ಚಾಲಕ ಸದಸ್ಯನಾಗಿ ಸೇವೆ ಸಲ್ಲಿಸಲು ತರಬೇತಿ ಹೊಂದಿದ ಮಾನವ ಬಾಹ್ಯಾಕಾಶದೊಳಗೆ- ಪ್ರಯಾಣಿಸುವ ಎಲ್ಲರಿಗೂ ಇದನ್ನು ಅನ್ವಯಿಸಲಾಗುತ್ತಿದೆ. ರಷ್ಯಾದ ಯೂರಿಗಗರಿನ್ ಅವರು 1961 ಏಪ್ರಿಲ್ 12ರಲ್ಲಿ ವೋಸ್ಪಾಕ್ ನಲ್ಲಿ ಬಾಹ್ಯಾಕಾಶ ಪ್ರವೇಶಿಸಿದ ಮೊದಲ ಗಗನಯಾತ್ರಿ ಎನಿಸಿದ್ದಾರೆ. 1963 ಜೂನ್ 16ರಲ್ಲಿ ರಷ್ಯಾದ ವ್ಯಾಲೆಂಟೀನಾ ಟೆರೆಸ್ಕೋವಾ ಬಾಹ್ಯಾಕಾಶ ಯಾನ ಕೈಗೊಂಡ ಮೊದಲ ಮಹಿಳೆ. ಚಂದ್ರನ ಮೇಲೆ ಪಾದ ಇರಿಸಿದ ಮೊದಲ ವ್ಯಕ್ತಿ – ನೀಲ್ ಆರ್ಮ್ ಸ್ಟ್ರಾಂಗ್. (1969ರ ಜುಲೈ 21)
11. ಪಾಶ್ಚಿನಾ ಶಾಲು (Pashmina Shawl) ಯಾವ ಕೂದಲಿನಿಂದ ತಯಾರಿಸಲಾಗುತ್ತದೆ " ಗಮನಿಸುತ್ತಾರೆ ?
- ಕುರಿಗಳು
- ಮೇಕೆ
- ಮೊಲ
- ಯಾಕ್
ಪಾಶ್ಚಿನಾ ಶಾಲು ಕಾಶ್ಮೀರದಲ್ಲಿ ಮೇಕೆಯ ಉಣ್ಣೆಯಿಂದ ಉತ್ಪಾದನೆಯಾಗುವ ಒಂದು ಶಾಲಾಗಿದೆ. ಪ್ರಸ್ತುತ ಲಡಾಖ್ ಪ್ರಾಂತ್ಯದಲ್ಲಿ ಮತ್ತು ನೇಪಾಳದಲ್ಲಿ ಅತಿ ಹೆಚ್ಚಾಗಿ ಈ ಶಾಲುಗಳನ್ನು ತಯಾರಿಸಲಾಗುತ್ತದೆ. ಪಾಶ್ ಎಂಬ ಪದವು ಪರ್ಶಿಯನ್ ಭಾಷೆಯಲ್ಲಿ ಉಣ್ಣೆ ಎಂಬ ಅರ್ಥವನ್ನು ನೀಡುತ್ತದೆ.
12. ಭಾರತೀಯ ರಾಜ್ಯ ಲಾಂಛನದಲ್ಲಿರುವ "ಸತ್ಯಮೇವ ಜಯತೇ' ಶಬ್ದವು ಯಾವ ಉಪನಿಷತ್‌ನಿಂದ ಅಳವಡಿಸಿಕೊಳ್ಳಲಾಗಿದೆ ?
- ಐತರೇಯ ಉಪನಿಷತ್
- ಮಂಡಕ ಉಪನಿಷತ್
- ಆಧ್ಯಾತ್ಮ ಉಪನಿಷತ್
- ಪ್ರಸ್ನ ಉಪನಿಷತ್
ಅಶೋಕನು ನಿರ್ಮಿಸಿದ ಸಾರನಾಥ ಸ್ತೂಪದ ಸಿಂಹ ಬೋದಿಗೆಯನ್ನು ಭಾರತದ ಲಾಂಛನವಾಗಿ ಅಳವಡಿಸಿಕೊಳ್ಳಲಾಗಿದೆ. ಇದರಲ್ಲಿ ಆನೆ, ಗೂಳಿ, ಕುದುರೆ ಮತ್ತು ಸಿಂಹಗಳ ಚಿತ್ರಣವಿದ್ದು, ಇವುಗಳ ಮಧ್ಯೆ ಧರ್ಮಚಕ್ರವಿದೆ. ಈ ಚಿಹ್ನೆಯ ಪೀಠದ ಕೆಳಗೆ ದೇವನಾಗರಿ ಲಿಪಿಯಲ್ಲಿ ಸತ್ಯಮೇವ ಜಯತೆ ಎಂಬ ಮಂಡಕ ಉಪನಿಷತ್ತಿನ ವಾಕ್ಯವಿದೆ. ಉಪನಿಷತ್ತು ಎಂದರೆ ಗುರುವಿನ ಬಳಿ ಪದದ ಅರ್ಥ ಕುಳಿತುಕೋ ಎಂಬ ಅರ್ಥ ನೀಡುತ್ತದೆ. ವೇದ ಜ್ಞಾನ ಅಥವಾ ತಿಳುವಳಿಕೆ. ವೇದಗಳಲ್ಲಿ ಅತ್ಯಂತ ಹಳೆಯ ವೇದ (ಋಗ್ರೇದ). ಇದು 1028 ಶ್ಲೋಕಗಳನ್ನು ಹೊಂದಿದೆ.
13. ಕರ್ನಾಟಕದಿಂದ ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಯಾರು?
- ಸರ್.ಎಂ.ವಿಶ್ವೇಶ್ವರಯ್ಯ
- ಭೀಮಸೇನ್ ಜೋಶಿ
- ಸಿ ಏನ್ ಆರ್ ರಾವ್
- ಗಿರೀಶ್ ಕಾರ್ನಾಡ್
1955ರಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಅವರಿಗೆ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಮೂಲಕ ಭಾರತ ರತ್ನ ಪಡೆದ ಮೊದಲ ಕನ್ನಡಿಗ ಎನಿಸಿದ್ದಾರೆ. 2021ರ ಜೂನ್‌ವರೆಗೆ ಒಟ್ಟು 48 ಜನರು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ಪಡೆದಿದ್ದಾರೆ. 2008ರಲ್ಲಿ ಭೀಮ್‌ಸೇನ್ ಜೋಷಿ, 2014ರಲ್ಲಿ ಸಿ.ಎನ್.ಆರ್.ರಾವ್ ಅವರು ಭಾರತ ರತ್ನ ಪಡೆದ ಇತರ ಕನ್ನಡಿಗರಾಗಿದ್ದಾರೆ.
14. ಜಿಲ್ಲಾ ಪೊಲೀಸ್ ಆಡಳಿತವನ್ನು ಹೀಗೆ ಉಪ ವಿಭಾಗ ಮಾಡಲಾಗಿದೆ ?
- ವಲಯ-ಸರ್ಕಲ್-ಪೊಲೀಸ್ ಸ್ಟೇಷನ್
- ಉಪವಿಭಾಗ-ಸರ್ಕಲ್-ಪೊಲೀಸ್ ಸ್ಟೇಷನ್
- ರೇಂಜ್-ವಲಯ-ಪೊಲೀಸ್ ಸ್ಟೇಷನ್
- ಉಪವಿಭಾಗ-ಉಪವಲಯ-ಪೊಲೀಸ್ ಸ್ಟೇಷನ್
ಜಿಲ್ಲಾ ಪೊಲೀಸ್ ಆಡಳಿತವನ್ನು ಉಪ ಉಪವಿಭಾಗ-ಸರ್ಕಲ್-ಪೊಲೀಸ್ ಸ್ಟೇಷನ್ ವಿಭಾಗ ಮಾಡಲಾಗಿದೆ. ಉಪ ವಿಭಾಗಗಳ ಪೊಲೀಸ್ ಮುಖ್ಯಸ್ಥರಾಗಿ ಪೊಲೀಸ್ ಉಪ ಅಧೀಕ್ಷಕರು (ಡಿವೈಎಸ್‌ಪಿ), ಗ್ರಾಮೀಣ ಪ್ರದೇಶದಲ್ಲಿ ಡಿವೈಎಸ್‌ಪಿ ಅಧೀನದಲ್ಲಿ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಅವರು ಕಾರ್ಯನಿರ್ವಹಿಸುತ್ತಾರೆ. ಗ್ರಾಮೀಣ ಭಾಗದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳು ಠಾಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ. ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ ಪಿ)ಯನ್ನು ಕರೆಯುತ್ತಾರೆ. ಪೊಲೀಸ್ ಮತ್ತು ಬಂಧೀಖಾನೆಯು ರಾಜ್ಯಪಟ್ಟಿಗೆ ಸಂಬಂಧಿಸಿವೆ.
15. ಕಂಪ್ಯೂಟರ್‌ನಲ್ಲಿನ ಎಲ್ಲಾ ವರ್ಡ್ ಡಾಕ್ಯುಮೆಂಟ್ ಗಳಿಗೆ ಡಿಫಾಲ್ಟ್ ಫೈಲ್ ವಿಸ್ತರಣೆ ಏನು ?
- TXT
- WRD
- DOC
- FIL
ಕಂಪ್ಯೂಟರ್‌ನಲ್ಲಿನ ಎಲ್ಲಾ ವರ್ಡ್ ಡಾಕ್ಯುಮೆಂಟ್‌ಗಳಿಗೆ ಡಿಫಾಲ್ಟ್ ಫೈಲ್ ವಿಸ್ತರಣೆಯು ಆಓಸಿಯನ್ನು ಸೂಚಿಸುತ್ತದೆ. ಮೈಕ್ರೋಸಾಫ್ಟ್ ವರ್ಡ್ ಎಂಬುದು ಮೈಕೋಸಾಫ್ಟ್ ಕಂಪನಿಯಿಂದ ಅಭಿವೃದ್ಧಿ ಪಡಿಸಿದ ವರ್ಲ್ಡ್ ಪ್ರೋಸೆಸರ್ (1983). ಮೈಕ್ರೋಸಾಫ್ಟ್ ಫೈಲ್ ನೇಮ್ ವಿಸ್ತರಣೆಯನ್ನು .doc ಮೂಲಕ ಸೂಚಿಸುತ್ತಾರೆ. .txt ಎಂಬುದು ಕಂಪ್ಯೂಟರ್ ಫೈಲ್‌ನ ಒಂದು ರೂಪವಾಗಿದೆ. ಇದು ಕಂಪ್ಯೂಟರ್ ಫೈಲ್ ವ್ಯವಸ್ಥೆಯ ಒಳಗೆ ದತ್ತಾಂಶವನ್ನು ಸಂಗ್ರಹಿಸಿ ಇಟ್ಟುಕೊಂಡಿರುತ್ತದೆ. ಕಂಪ್ಯೂಟರ್ ಫೈಲ್ ಎಂಬುದು ದತ್ತಾಂಶದ ದಾಖಲೆಯ ಕಂಪ್ಯೂಟರ್ ಸಂಪನ್ಮೂಲ.
16. ಈ ಕೆಳಗಿನವುಗಳಲ್ಲಿ ಯಾವುದು ಜಿಲ್ಲಾ ಪೊಲೀಸ್ ಸಂಘಟನೆಯ (District Police Organization) ಭಾಗದಲ್ಲ ?
- ಡಿಎಆರ್
- ಶ್ವಾನದಳ
- ಕೆಎಸ್‌ಆರ್‌ಪಿಎ
- ಬ್ಯಾಂಡ್ ಪಾರ್ಟಿ
ಕೊಟ್ಟಿರುವ ಆಯ್ಕೆಗಳ ಪ್ರಕಾರ ಕೆಎಸ್‌ಆರ್‌ಪಿಯು ಜಿಲ್ಲಾ ಪೊಲೀಸ್ ಸಂಘಟನೆಯ ಭಾಗವಾಗಿಲ್ಲ. ಕೆ.ಎಸ್. ಆರ್.ಪಿ ಎಂದರೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ. ಇದು ರಾಜ್ಯ ಸರ್ಕಾರದ ರಕ್ಷಣಾ ಪಡೆಯ ಒಂದು ಭಾಗವಾಗಿದೆ. ಇದು ಒಂದು ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯ ವ್ಯಾಪ್ತಿಯನ್ನು ಹೊಂದಿದೆ.
17. ವಿಜಯಪುರದ ಗೋಲ್ ಗುಂಬಜ್ ನಿರ್ಮಿಸಿದವರು ?
- ಬಹುಮನಿ ರಾಜವಂಶ
- ಆದಿಲ್ ಶಾಹಿ
- ತುಘಲಕ್
- ಕುತುಬ್ ಶಾಹಿ
ಭಾರತದ ಅತಿ ದೊಡ್ಡ ಗುಮ್ಮಟವಾದ ವಿಜಯಪುರದ ಗೋಲಗುಮ್ಮಟವನ್ನು ಬಿಜಾಪುರದ ಆದಿಲ್ ಷಾಹಿಗಳ ದೊರೆಯಾದ ಮಹಮದ್ ಆದಿಲ್ ಷಾ ಅವಧಿಯಲ್ಲಿ ನಿರ್ಮಿಸಲಾಗಿದೆ. ಈ ಗುಮ್ಮಟವು ಯಾವುದೇ ಸ್ಥಂಭಗಳ ಆಸರೆಯಿಲ್ಲದೆ ನಿರ್ಮಾಣ ಮಾಡಿರುವುದು ಮತ್ತು ಪಿಸುಮಾತಿನ ಗ್ಯಾಲರಿಗಳನ್ನು ಹೊಂದಿರುವುದು ವಿಶೇಷವಾಗಿದೆ. ವಿಶ್ವದ 2ನೇ ಅತೀ ದೊಡ್ಡ ಮಾನವ ನಿರ್ಮಿತ ಗುಂಬಜ್ ಎಂಬ ಕೀರ್ತಿಗೆ ಗೋಲಗುಮ್ಮಟ ಪಾತ್ರವಾಗಿದೆ. (ಇಟಲಿಯ ರೋಮ್ ನಗರದ ಬೆಸಿಲಿಕಾ ಚರ್ಚ್ ಮೊದಲ ಸ್ಥಾನ).
ಇದೊಂದು ಪ್ರಮುಖ ಪೋಸ್ಟ್ ಆಗಿದ್ದು, ನಮ್ಮ “website” ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಬಯಸುವವರಿಗೆ ಮಾರ್ಗದರ್ಶಿಯಾಗುತ್ತದೆ. ಇಲ್ಲಿ ನೀವು ಪರೀಕ್ಷೆಯ ಪಠ್ಯಕ್ರಮ, ಅಂಕಗಳ ಹಂಚಿಕೆ, ಮತ್ತು ಹೀಗಾಗಿ ಪರೀಕ್ಷೆಗೆ ತಯಾರಿ ಮಾಡಲು ಬಳಸಬಹುದಾದ ಪ್ರಮುಖ ತಂತ್ರಗಳು ಕುರಿತು ಸಂಪೂರ್ಣ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ. “ಪೊಲೀಸ್ ಕಾನ್ಸ್‌ಟೇಬಲ್ ಪಠ್ಯಕ್ರಮ (police constable syllabus) ಕನ್ನಡ – ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳುವುದು?” ಎಂಬ ಶೀರ್ಷಿಕೆಯ ಅಡಿಯಲ್ಲಿ, ನೀವು ಈ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಅಗತ್ಯವಾದ ಎಲ್ಲಾ ಮಾಹಿತಿಯನ್ನು ನೀಡಲಾಗುತ್ತದೆ.